ದಮ್ಮನಕಟ್ಟೆ ಸಫಾರಿಯಲ್ಲಿ ಹುಲಿಗಳ ದರ್ಶನ.. ಪ್ರವಾಸಿಗರು ಫುಲ್ ಖುಷ್: ವಿಡಿಯೋ ನೋಡಿ
ಎಚ್.ಡಿ.ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಸಫಾರಿ ಹೋದ ವೇಳೆ ಹುಲಿಗಳ ದರ್ಶನವಾಗಿದೆ. ಹುಲಿ ಮತ್ತು ಮರಿ ಸೇರಿ ಒಟ್ಟು 9 ಹುಲಿಗಳ ದರ್ಶನ.ವಾಗಿದ್ದು, ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.
ಪ್ರಾಣಿ ಪ್ರಿಯರಿಗೆ ಸಫಾರಿಗೆ ಹೋಗೋದು ಅಂದ್ರೆ ಅಚ್ಚುಮೆಚ್ಚು ಸಫಾರಿಗೆ ಹೋಗೋದು ಇತ್ತೀಚಿನ ದಿನದಲ್ಲಿ ಸರ್ವೇ ಸಾಮಾನ್ಯ. ಅದೃಷ್ಟ ಇದ್ರೆ ಪ್ರಾಣಿಗಳು ಕಣ್ಣಿಗೆ ಬೀಳ್ತವೆ. ಅದ್ರಲ್ಲೂ ಒಂದೇ ಒಂದು ಹುಲಿ ಕಣ್ಣಿಗೆ ಕಾಣಿಸಿದ್ರೆ ಸಾಕಪ್ಪಾ ಅನ್ನೋ ಪ್ರಾಣಿ ಪ್ರಿಯರು ಸಾಕಷ್ಟಿದ್ದಾರೆ. ಅದೆಷ್ಟೋ ಜನರಿಗೆ ಪ್ರಾಣಿಗಳ ದರ್ಶನ ಸಿಗೋದೇ ಇಲ್ಲ. ಒಂದು ವೇಳೆ ಪ್ರಾಣಿಗಳ ದರ್ಶನವಾದರೆ ಅವರ ಸಂತೋಷಕ್ಕೆ ಮಿತಿಯೇ ಇರೋಲ್ಲ. ಅದರಂತೆ ದಮ್ಮನಕಟ್ಟೆ ಅರಣ್ಯ ಪ್ರದೇಶದ ಸಫಾರಿ ವೇಳೆ ಹುಲಿ ಹಾಗೂ ಹುಲಿ ಮರಿಗಳ ದರ್ಶನವಾಗಿದ್ದು, ಫುಲ್ ಖುಷ್ ಆಗಿದ್ದಾರೆ. ಎಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್‌ನ ಮಹಾವೀರ್ ಜೈನ್ ಅವರ ಕ್ಯಾಮೆರಾದಲ್ಲಿ ಸೆರೆyಆಗಿದೆ. ಬಿಂದಾಸ್ ಆಗಿ ಹೆಜ್ಜೆ ಹಾಕಿದ ಹುಲಿ ಮತ್ತು ಮರಿಗಳನ್ನು ನೋಡಿ.