ಬೀದರ್: ತಲ್ವಾರ್ ಹಿಡಿದು ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸಿದ ಸಿಖ್ ಯುವಕರು, ಪೊಲೀಸರಿಂದ ಲಾಠಿ ಚಾರ್ಜ್
ತಲವಾರ್ ಹಿಡಿದುಕೊಂಡು ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ಚಾಲನೆ. ಸಿಖ್ ಧರ್ಮದ ಯುವಕರಿಂದ ಬೀದರ್ನಲ್ಲಿ ಹುಚ್ಚಾಟ. ಪ್ರಶ್ನೇ ಮಾಡಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನ.
ಬೀದರ್: ತಲವಾರ್ ತೆಗೆದುಕೊಂಡು ರಸ್ತೆಯಲ್ಲಿ ಬೇಕಾವಿಟ್ಟಿ ವಾಹನ ಚಲಾವಣೆ ಮಾಡುತ್ತಿದ್ದ ಸಿಖ್ ಧರ್ಮದ ಯುವಕರನ್ನು ಪ್ರಶ್ನೆ ಮಾಡಿದಕ್ಕೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ಬೀದರ್ ನ ಅಂಬೇಡ್ಕರ್ ವೃತ್ತದ ಬಳಿ ನಡೆದಿದೆ. ಇನ್ನು ತಲವಾರ್ ಬಿಸಾಡುವಾಗ ಓರ್ವ ವ್ಯಕ್ತಿಯ ಕೈಗೆ ತಾಗಿ ಚಿಕ್ಕಗಾಯವಾಗಿದೆ. ಪುಂಡಾಟ ತೋರಿಸಿದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ನಿನ್ನೆ ಗುರುನಾನಕ್ ಜಯಂತಿ ಇರುವ ಕಾರಣ ದೇಶದ ವಿವಿಧ ಕಡೆಯಿಂದ ಆಗಮಿಸಿದ್ದ ನೂರಾರು ಸಿಖ್ ಧರ್ಮದ ಯುವಕರು ಬೀದರ್ ನ ಐತಿಹಾಸಿಕ ಗುರುಧ್ವಾರಕ್ಕೆ ಭೇಟಿ ಕೊಟ್ಟರು. ಈ ವೇಳೆ ಕೆಲವು ಯುವಕರು ತಲವಾರ್ ಹಿಡಿದು ಅತೀ ವೇಗವಾಗಿ ಬೈಕ್ ಚಲಾಯಿಸಿದ್ದಾರೆ. ಇದನ್ನು ಪೊಲೀಸರು ಪ್ರಶ್ನಿಸಿದ್ದು ಸಿಖ್ ಯುವಕರು ಮತ್ತು ಪೊಲೀಸರ ನಡುವೆ ವಾಗ್ವಾದವಾಗಿ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
Published on: Nov 09, 2022 03:50 PM