Sim Home Delivery: ಹೊಸ ಸಿಮ್ ಕಾರ್ಡ್ ಬೇಕಾದರೆ ಮನೆಗೇ ತಂದು ಕೊಡ್ತಾರೆ!

|

Updated on: Mar 30, 2024 | 7:47 AM

ಇ ಸಿಮ್ ವ್ಯವಸ್ಥೆಯನ್ನು ದೇಶದಲ್ಲಿ ಪರಿಚಯಿಸಿದ್ದರೂ, ಜನರಿಗೆ ಮಾತ್ರ ಅದರ ಬಗ್ಗೆ ಅಷ್ಟೇನು ಒಲವಿಲ್ಲ. ಹೀಗಾಗಿ ಜನರು ಭೌತಿಕ ಸಿಮ್ ಕಾರ್ಡ್ ಬಗ್ಗೆಯೇ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕೆಲವೊಮ್ಮೆ ನಮಗೆ ತುರ್ತಾಗಿ ಸಿಮ್ ಕಾರ್ಡ್ ಬೇಕಿರುತ್ತದೆ. ಆದರೆ ಮನೆ ಪಕ್ಕ ಮೊಬೈಲ್ ಟೆಲಿಕಾಂ ಸೇವಾದಾರ ಕಂಪನಿಗಳ ಔಟ್​ಲೆಟ್ ಇರುವುದಿಲ್ಲ. ಅಲ್ಲದೆ, ಈ ಹಿಂದೆ ದೊರೆಯುತ್ತಿದ್ದಂತೆ ಸುಲಭದಲ್ಲಿ ಸಿಮ್ ಕಾರ್ಡ್ ರಸ್ತೆ ಬದಿ ಅಂಗಡಿಗಳಲ್ಲಿ ದೊರೆಯುತ್ತಿಲ್ಲ.

ಸಿಮ್ ಕಾರ್ಡ್ ಎನ್ನುವುದು ಇಂದು ಫೋನ್ ಹೊಂದಿರುವವರಿಗೆ ಎಲ್ಲರಿಗೂ ಅತೀ ಅಗತ್ಯವಾಗಿ ಬೇಕು. ಅದರಲ್ಲೂ ಇ ಸಿಮ್ ವ್ಯವಸ್ಥೆಯನ್ನು ದೇಶದಲ್ಲಿ ಪರಿಚಯಿಸಿದ್ದರೂ, ಜನರಿಗೆ ಮಾತ್ರ ಅದರ ಬಗ್ಗೆ ಅಷ್ಟೇನು ಒಲವಿಲ್ಲ. ಹೀಗಾಗಿ ಜನರು ಭೌತಿಕ ಸಿಮ್ ಕಾರ್ಡ್ ಬಗ್ಗೆಯೇ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕೆಲವೊಮ್ಮೆ ನಮಗೆ ತುರ್ತಾಗಿ ಸಿಮ್ ಕಾರ್ಡ್ ಬೇಕಿರುತ್ತದೆ. ಆದರೆ ಮನೆ ಪಕ್ಕ ಮೊಬೈಲ್ ಟೆಲಿಕಾಂ ಸೇವಾದಾರ ಕಂಪನಿಗಳ ಔಟ್​ಲೆಟ್ ಇರುವುದಿಲ್ಲ. ಅಲ್ಲದೆ, ಈ ಹಿಂದೆ ದೊರೆಯುತ್ತಿದ್ದಂತೆ ಸುಲಭದಲ್ಲಿ ಸಿಮ್ ಕಾರ್ಡ್ ರಸ್ತೆ ಬದಿ ಅಂಗಡಿಗಳಲ್ಲಿ ದೊರೆಯುತ್ತಿಲ್ಲ. ಅದರ ಬದಲು, ಸಿಮ್ ಕಾರ್ಡ್ ಹೋಮ್ ಡೆಲಿವರಿ ಹೊಸ ಆಯ್ಕೆಯಾಗಿ ಕಾಣಿಸಿಕೊಂಡಿದೆ.