ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್​ರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದ ಕಾರ್ಯಕರ್ತನಿಂದ ಕ್ಷಮೆಯಾಚನೆ

ಜೆಪಿಯ ಬಿಜೆಪಿ‌ ಚುನಾವಣಾ ಪ್ರಭಾರಿ ವೀಕ್ಷಕರಾದ ದೊಡ್ಡನಗೌಡ ಪಾಟೀಲ್ ಹಾಗೂ ಚಂದ್ರಶೇಖರ್ ಪಾಟೀಲ್ ಸಮ್ಮುಖದಲ್ಲಿ ನಡೆದ ಸಭೆಯೊಂದರಲ್ಲಿ ರಾಯಚೂರು ಹಾಲಿ ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ್ ವಿರುದ್ಧ ಶಿವಶರಣಪ್ಪ ಗೌಡ ಹೆಸರಿನ ಕಾರ್ಯಕರ್ತ ಬೈದಾಡಿದ್ದರು ಮತ್ತು ಚಪ್ಪಲಿಯಿಂದ ಹೊಡೆಯುತ್ತೇನೆ ಅಂತಲೂ ಹೇಳಿದ್ದರು.

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್​ರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದ ಕಾರ್ಯಕರ್ತನಿಂದ ಕ್ಷಮೆಯಾಚನೆ
|

Updated on: Mar 30, 2024 | 11:42 AM

ರಾಯಚೂರು: ಕೆಲ ಕಾರ್ಯಕರ್ತರ ವರಸೆಯೇ ಹಾಗೆ ಮಾರಾಯ್ರೇ. ತಮ್ಮ ನಾಯಕನ್ನು ಮೆಚ್ಚಿಸುವ ಭರದಲ್ಲಿ ಮತ್ತು ಜೊತೆ ಬೆಂಬಲಿಗರ ಚಪ್ಪಾಳೆ ಗಿಟ್ಟಿಸಲು ಎದುರಾಳಿ ನಾಯಕನ ವಿರುದ್ಧ ಮನಬಂದಂತೆ ಬೈದಾಡುತ್ತಾರೆ. ಆದರೆ ಎದುರಾಳಿ ನಾಯಕ ಮತ್ತು ಅವನ ಬೆಂಬಲಿಗರಿಂದ ತೀವ್ರ ಸ್ವರೂಪದ ವಿರೋಧ, ಖಂಡನೆ ವ್ಯಕ್ತವಾದ ಕೂಡಲೇ ಕ್ಷಮೆಯಾಚನೆಗೆ ಮುಂದಾಗುತ್ತಾರೆ. ನಿನ್ನೆ ಮಾನ್ವಿಯಲ್ಲಿರುವ ಬಿಜೆಪಿ ನಾಯಕ ಬಿವಿ ನಾಯಕ್ (BV Nayak) ಮನೆಯಲ್ಲಿ ನಡೆದ ಘಟನೆಯನ್ನು ನಾವು ವರದಿ ಮಾಡಿದ್ದೇವೆ. ಬಿಜೆಪಿಯ ಬಿಜೆಪಿ‌ ಚುನಾವಣಾ ಪ್ರಭಾರಿ ವೀಕ್ಷಕರಾದ ದೊಡ್ಡನಗೌಡ ಪಾಟೀಲ್ ಹಾಗೂ ಚಂದ್ರಶೇಖರ್ ಪಾಟೀಲ್ ಸಮ್ಮುಖದಲ್ಲಿ ನಡೆದ ಸಭೆಯೊಂದರಲ್ಲಿ ರಾಯಚೂರು ಹಾಲಿ ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ್ (Raichur BJP MP Raja Amareshwara Nayak) ವಿರುದ್ಧ ಶಿವಶರಣಪ್ಪ ಗೌಡ (Shivasharanappa Gouda) ಹೆಸರಿನ ಕಾರ್ಯಕರ್ತ ಬೈದಾಡಿದ್ದರು ಮತ್ತು ಚಪ್ಪಲಿಯಿಂದ ಹೊಡೆಯುತ್ತೇನೆ ಅಂತಲೂ ಹೇಳಿದ್ದರು. ವಿಡಿಯೋದ ಎಡಭಾಗದಲ್ಲಿ ಆ ಸನ್ನಿವೇಶವನ್ನು ನೋಡಬಹುದು. ವಿಡಿಯೋ ವೈರಲ್ ಆಗಿ ಸಂಸದನ ಬೆಂಬಲಲಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ವಿಡಿಯೋ ಸಂದೇಶವೊಂದರ ಮೂಲಕ ಕ್ಷಮೆಯಾಚಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ರಾಯಚೂರು ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಅತ್ಮಹತ್ಯೆಗೆ ಯತ್ನಿಸಿದ ಬಿವಿ ನಾಯಕ್ ಬೆಂಬಲಿಗರು

Follow us
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ಪವಿತ್ರಾ ಗೌಡ ಭೇಟಿಯಾಗಲು ಜೈಲಿಗೆ ಬಂದ ವಕೀಲ ಮಾಧ್ಯಮಕ್ಕೆ ಉಪನ್ಯಾಸ ನೀಡಿದರು!
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ದರ್ಶನ್ ನನಗೆ ಚೀಲದ ತುಂಬ ಹಣ ಕಳಿಸಿದ್ದರು: ನಟ ಹರೀಶ್ ರಾಯ್
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಅಮರನಾಥ ಗುಹೆಗೆ ಮೊದಲ ಬ್ಯಾಚ್​ನ 1100​​ ಭಕ್ತರಿಂದ ಯಾತ್ರೆ ಆರಂಭ
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಿದ್ದರಾಮಯ್ಯ ಡೆಮೋಕ್ರ್ಯಾಟಿಕಲ್ಲೀ ನೇಮಕವಾಗಿರುವ ಸಿಎಂ: ಸಂತೋಷ್ ಲಾಡ್
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಸಾಲ ವಾಪಸ್​ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಚಿತ್ರದುರ್ಗದಲ್ಲಿ ವಿದ್ಯಾರ್ಥಿನಿಯರಿಗಿಲ್ಲ ಸುರಕ್ಷತೆ? ಪುಂಡ ಪೋಕರಿಗಳ ಕಾಟ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಬೆಂಗಳೂರಿಗೆ ಸರ್ಕ್ಯೂಲರ್ ರೇಲ್ವೇ ಯೋಜನೆ ಘೋಷಿಸಿದ ರೇಲ್ವೇ ಸಚಿವ ವಿ ಸೋಮಣ್ಣ
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಉತ್ತರಾಖಂಡದಲ್ಲಿ ಪ್ರವಾಹ; ಗಂಗಾ ನದಿಯಲ್ಲಿ ತೇಲಿ ಹೋದ ಕಾರುಗಳು
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬಕ್ರೀದ್ ಹಬ್ಬದಲ್ಲಿ ಗೋಹತ್ಯೆ ನಡೆದಿವೆ ಎಂದು ಫೋನ್ ಬಿಸಾಡಿದ ಚನ್ನಬಸಪ್ಪ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ
ಬೆಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ಬಸ್​ಗಳು ಬೆಂಕಿಗಾಹುತಿ