ರಾಯಚೂರು ಬಿಜೆಪಿ ಸಂಸದರ ವಿರುದ್ಧ ನಾಲಿಗೆ ಹರಿಬಿಟ್ಟ ಸ್ವಪಕ್ಷದ ಕಾರ್ಯಕರ್ತ: ಚಪ್ಪಲಿಲಿ ಹೊಡಿತೀವಿ ಎಂದು ಆಕ್ರೋಶ

ರಾಯಚೂರು ಬಿಜೆಪಿ ಸಂಸದರ ವಿರುದ್ಧ ನಾಲಿಗೆ ಹರಿಬಿಟ್ಟ ಸ್ವಪಕ್ಷದ ಕಾರ್ಯಕರ್ತ: ಚಪ್ಪಲಿಲಿ ಹೊಡಿತೀವಿ ಎಂದು ಆಕ್ರೋಶ

ಭೀಮೇಶ್​​ ಪೂಜಾರ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 28, 2024 | 3:13 PM

ರಾಯಚೂರು ಲೋಕಸಭಾ ಟಿಕೆಟ್​(Raichur lok sabha Ticket) ಆಕಾಂಕ್ಷಿಯಾಗಿದ್ದ ಬಿವಿ ನಾಯಕ್ ಅವರಿಗೆ ಟಿಕೆಟ್​ ನೀಡದೆ, ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್​ಗೆ ಟಿಕೆಟ್​ ನೀಡಲಾಗಿದೆ. ಇದರಿಂದ ಬಿಜೆಪಿಯಲ್ಲಿಯೇ ಅಸಮಾಧಾನ ಸ್ಪೋಟವಾಗಿದ್ದು, ಇಂದು ಬಿವಿ ನಾಯಕ್​(B. V. Nayak) ಬಂಡಾಯ ಶಮನಕ್ಕೆ ಬಿಜೆಪಿ ಪ್ರಮುಖರು ನಡೆಸಿದ್ದ ಸಭೆಯಲ್ಲಿ ಬಿಜೆಪಿ ಸಚೇತಕ ದೊಡ್ಡನಗೌಡ ಪಾಟೀಲ್ ಎದುರಲ್ಲೇ ಹಾಲಿ ಸಂಸದರ ವಿರುದ್ಧ ಕಾರ್ಯಕರ್ತರು ನಾಲಿಗೆ ಹರಿಬಿಟ್ಟಿದ್ದಾರೆ.

ರಾಯಚೂರು, ಮಾ.28: ರಾಯಚೂರು ಲೋಕಸಭಾ ಟಿಕೆಟ್​(Raichur lok sabha Ticket) ಆಕಾಂಕ್ಷಿಯಾಗಿದ್ದ ಬಿವಿ ನಾಯಕ್ ಅವರಿಗೆ ಟಿಕೆಟ್​ ನೀಡದೆ, ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್​ಗೆ ಟಿಕೆಟ್​ ನೀಡಲಾಗಿದೆ. ಇದರಿಂದ ಬಿಜೆಪಿಯಲ್ಲಿಯೇ ಅಸಮಾಧಾನ ಸ್ಪೋಟವಾಗಿದ್ದು, ಇಂದು ಬಿವಿ ನಾಯಕ್​(B. V. Nayak) ಬಂಡಾಯ ಶಮನಕ್ಕೆ ಬಿಜೆಪಿ ಪ್ರಮುಖರು ನಡೆಸಿದ್ದ ಸಭೆಯಲ್ಲಿ ಬಿಜೆಪಿ ಸಚೇತಕ ದೊಡ್ಡನಗೌಡ ಪಾಟೀಲ್ ಎದುರಲ್ಲೇ ಹಾಲಿ ಸಂಸದರ ವಿರುದ್ಧ ಕಾರ್ಯಕರ್ತರು ನಾಲಿಗೆ ಹರಿಬಿಟ್ಟಿದ್ದಾರೆ. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ್​ಗೆ ಚಪ್ಪಲಿಲಿ ಹೊಡಿತಿವಿ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಒಂದುವರೆ ಲಕ್ಷ ಮತಗಳಿಂದ ಬಿವಿ ನಾಯಕ್ ಸೋತಿದ್ದರು. ಈಗ ಟೆಕೆಟ್ ಕೇಳೋಕೆ ಬಂದಿದ್ದಾರೆ ಎಂದು ಹಾಲಿ ಸಂಸದ ಹೇಳಿದ್ದಾರೆ. ಆದರೆ, ಇಂದಿರಾ ಗಾಂಧಿ ಕಾಲದಲ್ಲಿ ಕತ್ತೆ ನಿಂತ್ರೆ ಕತ್ತೆ ಗೆಲ್ತಿತ್ತು. ಈಗ ಮೋದಿ ಕಾಲದಲ್ಲಿ ಕತ್ತೆ ನಿಂತ್ರೆ ಕತ್ತೆ ಗೆಲ್ಲತ್ತೆ. ಹಾಲಿ ಸಂಸದ ಕಳೆದ ಬಾರಿ ಮೋದಿ ಹೆಸರಿನಲ್ಲಿ ಗೆದ್ದಿದ್ದರು, ಈಗ ಹಳ್ಳಿಗಳಿಗೆ ಬರ್ಲಿ ಚಪ್ಪಲೀಲಿ ಹೊಡಿತಿವಿ ಎಂದು ಹಾಲಿ ಸಂಸದರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ