ರಾಮನಗರದಲ್ಲಿ ಆರ್ಜಿಯುಹೆಚ್ಎಸ್ಗೆ 2006ರಲ್ಲಿ ಚಾಲನೆ ನೀಡಿದ್ದು ನಾನು, ಕಾಂಗ್ರೆಸ್ ಅಲ್ಲ: ಕುಮಾರಸ್ವಾಮಿ
2006 ರಲ್ಲಿ ತಾನು ಬಿಎಸ್ ಯಡಿಯೂರಪ್ಪನವರ ಜೊತೆ ಸರ್ಕಾರ ಮಾಡಿದಾಗ ರಾಜೀವ್ ಆರೊಗ್ಯ ವಿಶ್ವವಿದ್ಯಾಯಕ್ಕೆ (RGUHS) ಚಾಲನೆ ನೀಡಿದ್ದಾಗ್ಯೂ ನಂತರ ಅಧಿಕಾರಕ್ಕೆ ಬಂದು 5-ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಏನನ್ನೂ ಮಾಡಲಿಲ್ಲ ಎಂದ ಕುಮಾರಸ್ವಾಮಿ, ತಮ್ಮ ಬಲಭಾಗದಲ್ಲಿ ಕೂತಿದ್ದ ಅಶ್ವಥ್ ನಾರಾಯಣ ಅವರ ತೊಡೆ ತಟ್ಟಿ, ಇವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಯೋಜನೆ ಕೈಗೆತ್ತಿಕೊಂಡರು ಎಂದರು.
ಮಂಡ್ಯ: ಬಿಜೆಪಿ ಮತ್ತು ಜೆಡಿಎಸ್ ನಡುವೆ ಲೋಕಸಭಾ ಚುನಾವಣೆಗಾಗಿ ಮೈತ್ರಿ (BJP-JDS alliance) ಏರ್ಪಟ್ಟ ಬಳಿಕ ಎರಡು ಪಕ್ಷಗಳ ನಾಯಕರು ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಗಾಗಿ ಬಿಜೆಪಿ ಧುರೀಣರು ಮತ್ತು ಬಿಜೆಪಿ ನಾಯಕರ ಪರ ಜೆಡಿಎಸ್ ಮುಖಂಡರು ಪ್ರಚಾರ ಮಾಡುವುದು, ಮತ ಯಾಚಿಸುವುದು ಶುರುವಾಗಿದೆ. ಬೆಳಗ್ಗೆ ಮೈಸೂರಲ್ಲಿ ಜಂಟಿ ಕಾರ್ಯಕರ್ತರ ಸಮಾವೇಶ ನಡೆಸಿದ ಬಳಿಕ ಪಕ್ಷಗಳ ನಾಯಕರು ಅತ್ಯಂತ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ (Mandya LS seat) ಲಗ್ಗೆಯಿಟ್ಟರು. ನಗರದಲ್ಲಿ ಮಾಧ್ಯಮಗೋಷ್ಟಿಯೊಂದನ್ನು ಉದ್ದೇಶಿಸಿ ಮಾತಾಡುವಾಗ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy), ರಾಮನಗರಕ್ಕೆ ಅವರ ಕೊಡುಗೆ ಏನು ಅಂತ ಕಾಂಗ್ರೆಸ್ ನಾಯಕರು ಕೇಳುತ್ತಿದ್ದಾರೆ ಅಂತ ಪತ್ರಕರ್ತರು ಹೇಳಿದ್ದಕ್ಕೆ ವ್ಯಗ್ರರಾದರು. ತಾನು ಅಲ್ಲಿಗೆ ಹೋಗುವ ಮೊದಲು ಜಿಲ್ಲೆ ಹೇಗಿತ್ತು ಈಗ ಹೇಗಿದೆ ಅನ್ನೋದನ್ನು ಅವರು ನೋಡಲಿ, 2006 ರಲ್ಲಿ ತಾನು ಬಿಎಸ್ ಯಡಿಯೂರಪ್ಪನವರ ಜೊತೆ ಸರ್ಕಾರ ಮಾಡಿದಾಗ ರಾಜೀವ್ ಆರೊಗ್ಯ ವಿಶ್ವವಿದ್ಯಾಯಕ್ಕೆ (RGUHS) ಚಾಲನೆ ನೀಡಿದ್ದಾಗ್ಯೂ ನಂತರ ಅಧಿಕಾರಕ್ಕೆ ಬಂದು 5-ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಏನನ್ನೂ ಮಾಡಲಿಲ್ಲ ಎಂದ ಕುಮಾರಸ್ವಾಮಿ, ತಮ್ಮ ಬಲಭಾಗದಲ್ಲಿ ಕೂತಿದ್ದ ಅಶ್ವಥ್ ನಾರಾಯಣ ಅವರ ತೊಡೆ ತಟ್ಟಿ, ಇವರು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಯೋಜನೆ ಕೈಗೆತ್ತಿಕೊಂಡರು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಂಡ್ಯದಲ್ಲಿ ಸ್ಪರ್ಧೆ ಹಿಂದೆ ಕುಮಾರಸ್ವಾಮಿಯ ಹಲವು ರಾಜಕೀಯ ಲೆಕ್ಕಾಚಾರ!