AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಕುಟುಂಬದ ವಿರುದ್ಧ ಒಳಸಂಚು ನಡೆಯುತ್ತಿದೆ ಎಂದು 5-ವರ್ಷ ಹಿಂದೆಯೇ ತಂದೆ ಹೇಳಿದ್ದರು: ರೂಪಕಲಾ ಶಶಿಧರ್, ಶಾಸಕಿ

ನಮ್ಮ ಕುಟುಂಬದ ವಿರುದ್ಧ ಒಳಸಂಚು ನಡೆಯುತ್ತಿದೆ ಎಂದು 5-ವರ್ಷ ಹಿಂದೆಯೇ ತಂದೆ ಹೇಳಿದ್ದರು: ರೂಪಕಲಾ ಶಶಿಧರ್, ಶಾಸಕಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 28, 2024 | 5:22 PM

Share

ಸುಮಾರು ಐದು ವರ್ಷಗಳ ಹಿಂದೆಯೇ ತಮ್ಮ ತಂದೆ ಕೋಲಾರ ಕಾಂಗ್ರೆಸ್ ಘಟಕದಲ್ಲಿ ಒಳಸಂಚು ಕುತಂತ್ರ ನಡೆಯುತ್ತಿದೆ, ತಮ್ಮನ್ನು ತುಳಿಯುವ ಪ್ರಯತ್ನಗಳು ನಡೆದಿವೆ, ಅಂತ ಹೇಳಿದ್ದರು ಎಂದ ರೂಪಕಲಾ, ಯಾರೇನೇ ಮಾಡಿದರೂ ದೇವರು ಅಂತ ಮೇಲೊಬ್ಬನಿದ್ದಾನೆ, ತಮ್ಮನ್ನು ಆರಿಸಿ ಕಳಿಸುವ ಜನರಿದ್ದಾರೆ, ಅವರನ್ನು ವಂಚಿಸುವುದು ಸಾಧ್ಯವಿಲ್ಲ ಎಂದರು.

ಕೋಲಾರ: ವಿಷಯವೀಗ ಅಧಿಕೃತ! ಕೋಲಾರ ಕಾಂಗ್ರೆಸ್ ಶಿಬಿರದಲ್ಲಿ ನಡೆಯುತ್ತಿರುವುದು ಕೆಹೆಚ್ ಮುನಿಯಪ್ಪ (KH Muniyappa) ಕುಟುಂಬ ವರ್ಸಸ್ ಜಿಲ್ಲೆಯ ಉಳಿದ ನಾಯಕರು ಮತ್ತು ಕಾರ್ಯಕರ್ತರು. ನಿನ್ನೆಯವರೆಗೆ ಕೇವಲ ಮುನಿಯಪ್ಪ ಮಾತ್ರ ಮಾತಾಡುತ್ತಿದ್ದರು ಇವತ್ತು ಅವರ ಮಗಳು ರೂಪಕಲಾ ಶಶಿಧರ್ (Roopkala Shashidhar) ಪೀಲ್ಡಿಗಿಳಿದು ತಮ್ಮ ಕುಟುಂಬದ ವಿರುದ್ದ ಬಂಡಾಯವೆದ್ದಿರುವ ಕೋಲಾರದ ನಾಯಕರನ್ನು (Kolar Congress leaders) ಟೀಕಿಸಿದರು. ಕೇವಲ ಒಂದು ಅಂಶವನ್ನು ಹಿಡಿದುಕೊಂಡು ತಮ್ಮ ಕುಟುಂಬದ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ, ಕಾಂಗ್ರೆಸ್ ಪಕ್ಷದ ಶಿಸ್ತು ಮತ್ತು ಶಿಷ್ಟಾಚಾರವನ್ನು ಅವರು ಗಾಳಿಗೆ ತೂರಿದ್ದಾರೆ, ಆದರೆ ಪಕ್ಷದ ವರಿಷ್ಠರು ಎಲ್ಲವನ್ನು ಗಮನಿಸುತ್ತಿದ್ದಾರೆ, ಅವರು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಣಯ ತೆಗೆದುಕೊಳ್ಳುತ್ತಾರೆಂಬ ಭರವಸೆ ನಮಗಿದೆ ಎಂದು ರೂಪಕಲಾ ಹೇಳಿದರು. ಸುಮಾರು ಐದು ವರ್ಷಗಳ ಹಿಂದೆಯೇ ತಮ್ಮ ತಂದೆ ಕೋಲಾರ ಕಾಂಗ್ರೆಸ್ ಘಟಕದಲ್ಲಿ ಒಳಸಂಚು ಕುತಂತ್ರ ನಡೆಯುತ್ತಿದೆ, ತಮ್ಮನ್ನು ತುಳಿಯುವ ಪ್ರಯತ್ನಗಳು ನಡೆದಿವೆ, ಅಂತ ಹೇಳಿದ್ದರು ಎಂದ ರೂಪಕಲಾ, ಯಾರೇನೇ ಮಾಡಿದರೂ ದೇವರು ಅಂತ ಮೇಲೊಬ್ಬನಿದ್ದಾನೆ, ತಮ್ಮನ್ನು ಆರಿಸಿ ಕಳಸುವ ಜನರಿದ್ದಾರೆ, ಅವರನ್ನು ವಂಚಿಸುವುದು ಸಾಧ್ಯವಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪನವರನ್ನು ಸದನದಲ್ಲಿ ಮನಸಾರೆ ಕೊಂಡಾಡಿದ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್