ತಮ್ಮ ಕಚೇರಿಗೆ ಪ್ರಧಾನಿ ನರೇಂದ್ರ ಮೋದಿ ಫೋಟೋ ಬಳಸಿ ಯಡಿಯೂರಪ್ಪ ಕುಟುಂಬವನ್ನು ಇಕ್ಕಟ್ಟಿಗೆ ಸಿಲುಕಿಸಿದ ಈಶ್ವರಪ್ಪ
ನಿಸ್ಸಂದೇಹವಾಗಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಷಯವನ್ನು ಕೇಂದ್ರದ ನಾಯಕರ ಗಮನಕ್ಕೆ ತರಲಿದ್ದಾರೆ. ಪ್ರಧಾನಿ ಹೆಸರನ್ನು ಈಶ್ವರಪ್ಪ ನಿರ್ಭೀತಿಯಿಂದ ಬಳಸಿಕೊಂಡಿರುವುದನ್ನು ರಾಜಕೀಯ ತಜ್ಞರು ಹೇಗೆ ವಿಶ್ಲೇಷಿಸಲಿದ್ದಾರೋ? ಈಶ್ವರಪ್ಪ ನಡೆ ಮತ್ತು ನಿರ್ಧಾರಗಳನ್ನು ರಾಜ್ಯ ಬಿಜೆಪಿ ಘಟಕ ಮತ್ತು ವರಿಷ್ಠರು ಇದುವರೆಗೆ ಪಕ್ಷವಿರೋಧಿ ಚಟುವಟಿಕೆ ಅಂತ ಹೇಳಿಲ್ಲ ಮತ್ತು ವಿಜಯೇಂದ್ರ ಒಂದು ನೋಟೀಸನ್ನೂ ಈಶ್ವರಪ್ಪಗೆ ಜಾರಿ ಮಾಡಿಲ್ಲ.
ಶಿವಮೊಗ್ಗ: ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa) ತಮ್ಮ ಹಟಬಿಡಲು ತಯಾರಿಲ್ಲ. ಶಿವಮೊಗ್ಗ ಲೋಕಾಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ (independent candidate) ಸ್ಪರ್ಧಿಸುವ ತಮ್ಮ ಗುರಿಯೆಡೆ ಅವರು ಇಂದು ಮತ್ತೊಂದು ಹೆಜ್ಜೆ ಮುಂದಿಟ್ಟರು. ದೃಶ್ಯಗಳಲ್ಲಿ ಕಾಣುವ ಹಾಗೆ ನಗರದಲ್ಲಿ ಅವರು ಇಂದು ಕಚೇರಿಯನ್ನು ಆರಂಭಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ (PM Narendra Modi ) ಫೋಟೋ ಬಳಸಿಕೊಂಡಿದ್ದಾರೆ. ರಾಷ್ಟ್ರಭಕ್ತರ ಬಳಗದ ಅಭ್ಯರ್ಥಿಯಾಗಿ ಈಶ್ವರಪ್ಪ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಕಚೇರಿಗೆ ಶಿವಮೊಗ್ಗ ಲೋಕಸಭಾ ಚುನಾವಣೆ ಕಾರ್ಯಾಲಯ ಅಂತ ಹೆಸರಿಟ್ಟು ಪ್ರಧಾನಿ ಮೋದಿಯವರ ಪೋಟೋ ಬಳಸಿರುವುದು ಬಿಎಸ್ ಯಡಿಯೂರಪ್ಪ ಮತ್ತು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಮಗ ಬಿವೈ ರಾಘವೇಂದ್ರ ಅವರಿಗೆ ಸಾಕಷ್ಟು ಇರುಸು ಮುರುಸು ಉಂಟು ಮಾಡಿರಬಹುದು. ನಿಸ್ಸಂದೇಹವಾಗಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿಷಯವನ್ನು ಕೇಂದ್ರದ ನಾಯಕರ ಗಮನಕ್ಕೆ ತರಲಿದ್ದಾರೆ. ಪ್ರಧಾನಿ ಹೆಸರನ್ನು ಈಶ್ವರಪ್ಪ ನಿರ್ಭೀತಿಯಿಂದ ಬಳಸಿಕೊಂಡಿರುವುದನ್ನು ರಾಜಕೀಯ ತಜ್ಞರು ಹೇಗೆ ವಿಶ್ಲೇಷಿಸಲಿದ್ದಾರೋ? ಈಶ್ವರಪ್ಪ ನಡೆ ಮತ್ತು ನಿರ್ಧಾರಗಳನ್ನು ರಾಜ್ಯ ಬಿಜೆಪಿ ಘಟಕ ಮತ್ತು ವರಿಷ್ಠರು ಇದುವರೆಗೆ ಪಕ್ಷವಿರೋಧಿ ಚಟುವಟಿಕೆ ಅಂತ ಹೇಳಿಲ್ಲ ಮತ್ತು ವಿಜಯೇಂದ್ರ ಒಂದು ನೋಟೀಸನ್ನೂ ಈಶ್ವರಪ್ಪಗೆ ಜಾರಿ ಮಾಡಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೆಎಸ್ ಈಶ್ವರಪ್ಪ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್; ಬ್ರಹ್ಮ ಬಂದರೂ ನಾನು ಚುನಾವಣೆ ಸ್ಪರ್ಧೆ ಖಚಿತ ಎಂದ ಈಶ್ವರಪ್ಪ