‘ಜಾಕಿ’ ಹಾಗೂ ‘ಎಕ್ಕ’ ಚಿತ್ರಕ್ಕಿರೋ ಹೋಲಿಕೆ ಏನು? ವಿವರಿಸಿದ ಯುವ ರಾಜ್​ಕುಮಾರ್

Updated on: Jul 16, 2025 | 11:13 AM

ಯುವ ರಾಜ್​ಕುಮಾರ್ ಅವರು ‘ಎಕ್ಕ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಈ ವಾರ ತೆರೆಗೆ ಬರಲಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೂ ‘ಜಾಕಿ’ ಚಿತ್ರಕ್ಕೂ ಸಾಕಷ್ಟು ಹೋಲಿಕೆ ಇದೆಯಂತೆ. ಆ ಬಗ್ಗೆ ಯುವ ಮಾತನಾಡಿದ್ದಾರೆ.

‘ಎಕ್ಕ’ ಹಾಗೂ ‘ಜಾಕಿ’ ಚಿತ್ರಕ್ಕೆ ಸಾಕಷ್ಟು ಹೋಲಿಕೆ ಇದೆ. ಈ ಬಗ್ಗೆ ಯುವ ರಾಜ್​ಕುಮಾರ್ (Yuva Rajkumar) ಮಾತನಾಡಿದ್ದಾರೆ. ‘ನನ್ನ ಲುಕ್ ಜಾಕಿ ಸಿನಿಮಾದಿಂದ ಪಡೆದ ಸ್ಫೂರ್ತಿ. ನಾವು ಜಾಕಿ ಚಿತ್ರದಿಂದ ರೆಫರೆನ್ಸ್ ತಗೊಂಡಿದ್ದೇವೆ. ಆ ಸಿನಿಮಾ ನನಗೆ ಇಷ್ಟ. ಆ ಸ್ಟೈಲ್​ನಲ್ಲೇ ಮಾಡೋಣ ಎಂದು ಮಾಡಿದ್ದೇವೆ. ಜಾಕಿ ಸಿನಿಮಾದ ಶೇಡ್ ಬರಲು ಸತ್ಯ ಹೆಗಡೆ ಕೂಡ ಕಾರಣ. ಅವರು ಕೂಡ ಜಾಕಿ ಸಿನಿಮಾಗೆ ಶೂಟ್ ಮಾಡಿದ್ದರು. ಈ ಚಿತ್ರಕ್ಕೂ ಅವರೇ ಕೆಲಸ ಮಾಡಿದ್ದಾರೆ. ಜಾಕಿ ಚಿತ್ರದ ಲೊಕೇಶನ್​ಗಳನ್ನು ಇಲ್ಲಿಯೂ ಬಳಕೆ ಮಾಡಿಕೊಳ್ಳಾಗಿದೆ’ ಎಂದಿದ್ದಾರೆ ಯುವ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 16, 2025 11:06 AM