ಒಟಿಟಿ ಬಗ್ಗೆ ಕಹಿ ಸತ್ಯ ಹೇಳಿದ ನಿರ್ದೇಶಕ ಸಿಂಪಲ್ ಸುನಿ
Simple Suni about OTT: ಒಟಿಟಿಗಳ ಬಗ್ಗೆ ಕಹಿ ಸತ್ಯವೊಂದನ್ನು ನಿರ್ದೇಶಕ ಸಿಂಪಲ್ ಸುನಿ ಹಂಚಿಕೊಂಡಿದ್ದಾರೆ. ಒಟಿಟಿಗಳಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ.
ನಿರ್ದೇಶಕ ಸಿಂಪಲ್ ಸುನಿ (Simple Suni) ನಿರ್ದೇಶಿಸಿರುವ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ಸಿಂಪಲ್ ಸುನಿಯೊಟ್ಟಿಗೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದ ಪ್ರಮೋದ್ ನಿರ್ದೇಶಿಸಿರುವ ‘ದಿಲ್ ಖುಷ್’ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಒಟಿಟಿ ಬಗ್ಗೆ ಕಹಿ ಸತ್ಯವೊಂದನ್ನು ಹಂಚಿಕೊಂಡಿದ್ದಾರೆ. ‘ಒಟಿಟಿ ಬಂದಾಗ ಒಳ್ಳೆಯದಾಯ್ತು, ನಾವು ಅಂದುಕೊಂಡಂತೆ ಸಿನಿಮಾ ಮಾಡಬಹುದು ಎಂದುಕೊಂಡಿದ್ದೆವು. ಆದರೆ ಆಗಿದ್ದೇ ಬೇರೆ. ಒಳ್ಳೆಯ ಸಿನಿಮಾಗಳನ್ನು ಸಹ ಜನ, ಒಟಿಟಿಗೆ ಬರಲಿ ನೋಡೋಣ ಎಂದುಕೊಂಡು ಚಿತ್ರಮಂದಿರಕ್ಕೆ ಬರದೇ ಆಗುತ್ತಿದ್ದಾರೆ. ನಮ್ಮ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಒಟಿಟಿ, ಟಿವಿ ಹಕ್ಕುಗಳನ್ನು ಮಾರಾಟ ಆಗಿವೆ. ಆದರೆ ನಾವು ಹೇಳಿಕೊಳ್ಳುತ್ತಿಲ್ಲ. ಹೇಳಿಬಿಟ್ಟರೆ, ಒಟಿಟಿಗೆ ಬಂದಾಗ ನೋಡಿಕೊಳ್ಳೋಣ ಅಂದುಕೊಳ್ಳುತ್ತಾರೆ ಎಂದು ಇನ್ನೂ ಸೇಲ್ ಆಗಿಲ್ಲ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದೀವಿ’ ಎಂದಿದ್ದಾರೆ ಸುನಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ