ಜವಾಬ್ದಾರಿಯುತ ಸ್ಥಾನದಲ್ಲಿರುವ ಲಕ್ಷ್ಮಿ ಹೆಬ್ಬಾಳ್ಕರ್ ಬೇಜವಾಬ್ದಾರಿ ಹೇಳಿಕೆ ನೀಡಬಾರದು: ಹೆಚ್ ಡಿ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರೇ ಹೇಳಿದ್ದಾರೆ ಅನ್ನುತ್ತಾರೆ! ಮುಂದುವವರಿದು ಮಾತಾಡುವ ಅವರು, ರಾಜ್ಯ ಭೀಕರ ಬರಗಾಲದಿಂದ ತತ್ತರಿಸಿ ಬೆಳೆಹಾನಿಯಿಂದ ಕಂಗಾಲಾಗಿರುವ ರೈತರನ್ನು ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರಿಗೆ (HD Kumaraswamy) ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೂ ಅದನ್ನವರು ಮುಖ್ಯಮಂತ್ರಿ ಸಿದ್ದರಾಮಯ್ಯಲ್ಲಿಗೆ (CM Siddaramaiah) ತರುತ್ತಾರೆ. ಬೆಂಗಳೂರಲ್ಲಿಂದು ಮಾಧ್ಯಮ ಪ್ರತಿನಿಧಿಗಳೂ ಅವರಿಗೆ, ಬೆಳಗಾವಿ ಮೊದಲು ಮಹಾರಾಷ್ಟ್ರಕ್ಕೆ ಸೇರಿತ್ತು ಎಂಬ ವಿವಾದಾತ್ಮಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನೀಡಿರುವ ಹೇಳಿಕೆ ಕಡೆ ಗಮನ ಸೆಳೆದರೆ ಕುಮಾರಸ್ವಾಮಿ, ಅದಿರಲಿ ಸ್ವಾಮಿ, ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಸಿಎಂ ಅವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರೇ ಹೇಳಿದ್ದಾರೆ ಅನ್ನುತ್ತಾರೆ! ಮುಂದುವವರಿದು ಮಾತಾಡುವ ಅವರು, ರಾಜ್ಯ ಭೀಕರ ಬರಗಾಲದಿಂದ ತತ್ತರಿಸಿ ಬೆಳೆಹಾನಿಯಿಂದ ಕಂಗಾಲಾಗಿರುವ ರೈತರನ್ನು ಸಿದ್ದರಾಮಯ್ಯ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ, ಗೃಹ ಲಕ್ಷ್ಮಿಯೋಜನೆ ಅಡಿಯಲ್ಲಿ ಎಷ್ಟು ಜನ ಫಲಾನುಭವಿಗಳು, ಅವರಿಗೆ ಪ್ರತಿ ತಿಂಗಳು ರೂ. 2,000 ಸಾವಿರ ಸಿಗುತ್ತಿದೆಯೇ ಇಲ್ಲವೇ ಅಂತ ಯಾರಿಗೂ ಗೊತ್ತಿಲ್ಲ ಎನ್ನುತ್ತಾರೆ. ಅಂತಿಮವಾಗಿ ಹೆಬ್ಬಾಳ್ಕರ್ ಹೇಳಿಕೆ ವಿಷಯದಲ್ಲಿ ಮಾತಾಡುವ ಕುಮಾರಸ್ವಾಮಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮುಗಿದ ಅಧ್ಯಾಯವನ್ನು ಕೆದಕಿ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಮ್ಮ ಸಚಿವರ ಮೇಲೆ ಹಿಡಿತವಿದ್ದರೆ, ಇಂಥ ಬೇಜವ್ದಾರಿ ಹೇಳಿಕೆ ನೀಡದಂತೆ ತಾಕೀತು ಮಾಡಬೇಕು ಎಂದರು.
ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ