ಜನತಾ ಜಲಧಾರೆ ಯೋಜನೆಯನ್ನು ಜನರೇ ತಿರಸ್ಕರಿಸುವಾಗ ಸರ್ಕಾರಕ್ಕೇನು ಅದರ ಬಗ್ಗೆ ಸಲಹೆ ನೀಡೋದು? ಹೆಚ್ ಡಿ ಕುಮಾರಸ್ವಾಮಿ

|

Updated on: Aug 23, 2023 | 12:36 PM

ಕಳೆದ 3-4 ವರ್ಷಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಯಾವುದೇ ಸಮಸ್ಯೆ ಇರಲಿಲ್ಲ ಮತ್ತು ಎಲ್ಲರೂ ಮೂಲ ಸಮಸ್ಯೆಯನ್ನು ಮರೆತು ಕೂತಿದ್ದರು. ಈ ವರ್ಷ ಮಳೆ ಕಡಿಮೆಯಾಗಿದೆ ಮತ್ತು ಜಲಾಶಯಗಳಲ್ಲಿ ನೀರಿಲ್ಲ ಹಾಗಾಗಿ ಸಂಕಷ್ಟ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ತಮಿಳುನಾಡುಗೆ ಕಾವೇರಿ ನದಿ ನೀರು (Cauvery River water ) ಹರಿಸುವ ಬಗ್ಗೆ ತಲೋದಿರಿರುವ ಸಮಸ್ಯೆಗೆ ಸಂಬಂಧಿಸಿದಂತೆ ಒಂದು ಪರಿಹಾರ ಕಂಡುಕೊಳ್ಳಲು ಸಿದ್ದರಾಮಯ್ಯ ಸರ್ಕಾರ ಇಂದು ಸರ್ವಪಕ್ಷ ಸಭೆಯನ್ನು (all party meet) ಕರೆದಿದೆ. ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಸರಕಾರಕ್ಕೆ ಸಲಹೆ ನೀಡುವುದು ಎರಡನೇ ವಿಚಾರ, ರಾಜ್ಯ ಸರ್ಕಾರ, ತಮಿಳುನಾಡುನೊಂದಿಗೆ ಏನೇನು ಮಾತಾಡಿಕೊಂಡಿದೆಯೋ ಯಾರಿಗ್ಗೊತ್ತು? ಎಂದರು. ಕಳೆದ 3-4 ವರ್ಷಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಯಾವುದೇ ಸಮಸ್ಯೆ ಇರಲಿಲ್ಲ ಮತ್ತು ಎಲ್ಲರೂ ಮೂಲ ಸಮಸ್ಯೆಯನ್ನು ಮರೆತು ಕೂತಿದ್ದರು. ಈ ವರ್ಷ ಮಳೆ ಕಡಿಮೆಯಾಗಿದೆ ಮತ್ತು ಜಲಾಶಯಗಳಲ್ಲಿ ನೀರಿಲ್ಲ ಹಾಗಾಗಿ ಸಂಕಷ್ಟ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು. ಚುನಾವಣಾ ಸಮಯದಲ್ಲಿ ಜನತಾ ಜಲಧಾರೆ (Janata Jaladhare) ಅಭಿಯಾನ ನಡೆಸಿದ ಬಗ್ಗೆ ಪತ್ರಕರ್ತರೊಬ್ಬರು ಜ್ಞಾಪಿಸಿದಾಗ ಕುಮಾರ ಸ್ವಾಮಿ; ಆ ಯೋಜನೆಯನ್ನು ಜನರೇ ತಿರಸ್ಕರಿರುವಾಗ ಸರ್ಕಾರಕ್ಕೇನು ಅದನ್ನು ಕುರಿತು ಹೇಳೋದು ಎಂದರು. ಅಸಲಿಗೆ ಸರ್ವಪಕ್ಷ ಸಭೆ ನಡೆಸಿ ಅಂತ ವಿರೋಧ ಪಕ್ಷದ ನಾಯಕರು ದುಂಬಾಲು ಬಿದ್ದ ಕಾರಣ ಸರ್ಕಾರ ಸಬೆ ಕರೆದಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Aug 23, 2023 12:34 PM