ದರ್ಶನ್ ತೂಗುದೀಪ ಪರಿಸ್ಥಿತಿ ಬಗ್ಗೆ ಗಾಯಕ ಬಾಳು ಬೆಳಗುಂದಿ ಹೇಳೋದೇನು?

Edited By:

Updated on: Sep 14, 2025 | 10:05 AM

‘ಸರಿಗಮಪ’ ಖ್ಯಾತಿಯ ಸಿಂಗರ್ ಬಾಳು ಬೆಳಗುಂದಿ ಅವರ ಹೊಸ ಹಾಡು ಬಿಡುಗಡೆ ಆಗಿದೆ. ‘ಬ್ರ್ಯಾಟ್​’ ಚಿತ್ರದ ‘ಗಂಗಿ ಗಂಗಿ’ ಗೀತೆಗೆ ಅವರೇ ಸಾಹಿತ್ಯ ಬರೆದು ಹಾಡಿದ್ದಾರೆ. ಸಾಂಗ್ ಬಿಡುಗಡೆ ಬಳಿಕ ಅವರು ಟಿವಿ9 ಜತೆ ಮಾತನಾಡಿದರು. ಈ ವೇಳೆ ದರ್ಶನ್ ಬಗ್ಗೆಯೂ ಅವರು ಮಾತಾಡಿದರು.

‘ಸರಿಗಮಪ’ ಖ್ಯಾತಿಯ ಗಾಯಕ ಬಾಳು ಬೆಳಗುಂದಿ ಅವರ ಹೊಸ ಸಾಂಗ್ ಬಿಡುಗಡೆ ಆಗಿದೆ. ‘ಬ್ರ್ಯಾಟ್’ ಸಿನಿಮಾದ ‘ಗಂಗಿ ಗಂಗಿ’ (Gangi Gangi) ಗೀತೆಗೆ ಅವರೇ ಸಾಹಿತ್ಯ ಬರೆದು ಹಾಡಿದ್ದಾರೆ. ಹಾಡಿನ ಬಿಡುಗಡೆ ಬಳಿಕ ಅವರು ಟಿವಿ9 ಜೊತೆ ಮಾತನಾಡಿದರು. ಈ ವೇಳೆ ನಟ ದರ್ಶನ್ (Darshan Thoogudeepa) ಬಗ್ಗೆಯೂ ಅವರು ಮಾತಾಡಿದರು. ‘ನಾನು ಒಬ್ಬ ಅಭಿಮಾನಿಯಾಗಿ ದರ್ಶನ್ ಅವರಿಗೆ ಕೆಟ್ಟದ್ದು ಬಯಸೋಕೆ ಆಗಲ್ಲ. ಕಾನೂನಿನ ಮೂಲಕ ಅವರು ಮಾಡಿದ್ದು ಸರಿ ಅಥವಾ ತಪ್ಪು ಅಂತ ಕೂಡ ನಾವು ಹೇಳೋಕೆ ಆಗಲ್ಲ. ಕೆಟ್ಟ ಟೈಮ್ ಎಲ್ಲರಿಗೂ ಬರುತ್ತೆ. ಆ ಟೈಮ್ ಕಳೆದು, ಅವರು ಮತ್ತೆ ಮೊದಲಿನ ರೀತಿ ಆಗಬೇಕು. ಅವರನ್ನು ನಾವು ದೊಡ್ಡ ಪರದೆ ಮೇಲೆ ಮತ್ತೆ ನೋಡಬೇಕು’ ಎಂದು ಬಾಳು ಬೆಳಗುಂದಿ (Balu Belagundi) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More