ಸಂಗೀತಾ ಕಟ್ಟಿ ಹಾಡು ಮೆಚ್ಚಿಕೊಂಡಿದ್ದ ಎಸ್ಎಲ್ ಭೈರಪ್ಪ: ಗಾಯನದ ಮೂಲಕ ಅಂತಿಮ ನಮನ
ಗಾಯಕಿ ಸಂಗೀತಾ ಕಟ್ಟಿ ಅವರು ಎಸ್ಎಲ್ ಭೈರಪ್ಪ ಅವರ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡಿದ್ದಾರೆ. ಬೇಂದ್ರೆಯವರ ‘ಬಾರೋ ಸಾಧನಕೇರಿಗೆ..’ ಗೀತೆಯನ್ನು ಹಾಡುವ ಮೂಲಕ ಎಸ್ ಎಲ್ ಭೈರಪ್ಪನವರಿಗೆ ಸಂಗೀತಾ ಕಟ್ಟಿ ಅವರು ಅಂತಿಮ ನಮನ ಸಲ್ಲಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
ಲೆಜೆಂಡರಿ ಲೇಖಕ ಎಸ್ಎಲ್ ಭೈರಪ್ಪ (SL Bhyrappa) ಅವರು ಕೊನೆಯುಸಿರು ಎಳೆದಿದ್ದಾರೆ. ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಚಿತ್ರರಂಗದ ಅನೇಕರು ಬಂದು ಅಂತಿಮ ದರ್ಶನ ಪಡೆದಿದ್ದಾರೆ. ಗಾಯಕಿ ಸಂಗೀತಾ ಕಟ್ಟಿ ಕೂಡ ಎಸ್ಎಲ್ ಭೈರಪ್ಪ ಅವರ ಜೊತೆಗಿನ ಒಡನಾಟವನ್ನು ನೆನಪು ಮಾಡಿಕೊಂಡಿದ್ದಾರೆ. ‘ವಿದ್ಯಾರ್ಥಿ ಆಗಿದ್ದಾಗಿನಿಂದಲೂ ನಾನು ಅವರ ಅಭಿಮಾನಿ. ನಾನು ಹಾಡುತ್ತೇನೆ ಎಂಬುದು ಅವರಿಗೆ ಆಗಲೇ ಗೊತ್ತಿತ್ತು. ಅವರ ಮಾತುಗಳನ್ನು ನಾನು ರಕ್ಷೆ ಎಂದು ತೆಗೆದುಕೊಂಡಿದ್ದೇನೆ. ಹಿಂದೂಸ್ತಾನಿ ಸಂಗೀತ ಮತ್ತು ಬೇಂದ್ರೆ ಸಂಗೀತದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಅವರ ಪ್ರೇರಣೆ ಯಾವಾಗಲೂ ಇರಲಿ ಅಂತ ದೇವರಲ್ಲಿ ಕೇಳಿಕೊಳ್ಳುತ್ತೇನೆ’ ಎಂದು ಸಂಗೀತಾ ಕಟ್ಟಿ (Sangeetha Katti) ಹೇಳಿದ್ದಾರೆ. ಬೇಂದ್ರೆಯವರ ‘ಬಾರೋ ಸಾಧನಕೇರಿಗೆ..’ ಗೀತೆಯನ್ನು ಹಾಡುವ ಮೂಲಕ ಭೈರಪ್ಪನವರಿಗೆ ಸಂಗೀತಾ ಕಟ್ಟಿ ಅವರು ಅಂತಿಮ ನಮನ ಸಲ್ಲಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Sep 24, 2025 06:43 PM
