ಮೈಸೂರಿನಲ್ಲಿ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ: FIR ದಾಖಲು
ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮತದಾರರ ಹೆಸರು ಡಿಲೀಟ್ ಮಾಡಲು ಫಾರ್ಮ್ 7 ದುರ್ಬಳಕೆ ಆರೋಪದ ಮೇಲೆ ಹರೀಶ್ ಕುಮಾರ್, ರಾಘವೇಂದ್ರ, ಅನಿಲ್ ಥಾಮಸ್ ಸೇರಿ ಹಲವರ ವಿರುದ್ಧ ನರಸಿಂಹರಾಜ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ನಲ್ಲಿ ಅನಿಲ್ ಬಿಜೆಪಿ ಕಾರ್ಯಕರ್ತ ಎಂದು ಉಲ್ಲೇಖವಾಗಿದೆ.
ಬೆಂಗಳೂರು, (ಅಕ್ಟೋಬರ್ 02): ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದ್ದು, ಈ ವೇಳೆ ಫಾರ್ಮ್-7 ಗೊಂದಲ ಉದ್ಭವಿಸಿದೆ. ಫಾರ್ಮ್ 7 ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಂತವರ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಕೆ ಶಿವಕುಮಾರ್ ಸರ್ಕಾರ, ರಾಜ್ಯ ಚುನಾವಣಾ ಆಯೋಗಕ್ಕೆ ಆಗ್ರಹಿಸಿದೆ. ಈ ಸಂಬಂಧ ಧರಣಿ ಸಹ ನಡೆಸಿತ್ತು. ಇದರ ಬೆನ್ನಲ್ಲೇ ಬಿಎಲ್ಓಗಳಿಗೆ ಚುನಾವಣೆ ಆಯೋಗ ಖಡಕ್ ಸೂಚನೆ ನೀಡಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಚುನಾವಣಾ ಆಯೋಗದ ಫಾರ್ಮ್-7 ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮತದಾರರ ಹೆಸರು ಡಿಲೀಟ್ ಮಾಡಲು ಫಾರ್ಮ್ 7 ದುರ್ಬಳಕೆ ಆರೋಪದ ಮೇಲೆ ಹರೀಶ್ ಕುಮಾರ್, ರಾಘವೇಂದ್ರ, ಅನಿಲ್ ಥಾಮಸ್ ಸೇರಿ ಹಲವರ ವಿರುದ್ಧ ನರಸಿಂಹರಾಜ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ನಲ್ಲಿ ಅನಿಲ್ ಬಿಜೆಪಿ ಕಾರ್ಯಕರ್ತ ಎಂದು ಉಲ್ಲೇಖವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
