ವಾವ್​! ಮಳೆಯಿಂದಾಗಿ ಮತ್ತೆ ಜೀವ ಕಳೆ ಪಡೆದ ಸಿರಿಮನೆ ಜಲಪಾತ

|

Updated on: Jul 04, 2024 | 4:56 PM

ಮಳೆಗಾಲ ಬಂತೆದರೆ ಸಾಕು ಪ್ರಕೃತಿಯೂ ಹಚ್ಚ ಹಸಿರಿನಿಂದ ಮೈತುಂಬಿಕೊಳ್ಳುತ್ತದೆ. ದಿನದ ಜಂಜಾಟವನ್ನೇಲ್ಲ ಮರೆತು ಇದರ ಮಡಿಲಿನಲ್ಲಿ ಕೊಂಚ ವಿಶ್ರಮಿಸಬೇಕೆನ್ನುವ ಅನೇಕರಿಗೆ ಸಿರಿಮನೆ ಜಲಪಾತ ಕೈಬೀಸಿ ಕರೆಯುತ್ತಿದೆ. ಹೌದು, ಮಳೆಯಿಂದಾಗಿ ‘ಸಿರಿಮನೆ ಜಲಪಾತ’ ಮತ್ತೆ ಜೀವ ಕಳೆ ಪಡೆದಿದ್ದು, ಹಾಲ್ನೊರೆಯಂತೆ ಉಕ್ಕಿ ಹರಿಯುತ್ತಿದೆ.

ಚಿಕ್ಕಮಗಳೂರು, ಜು.04: ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರಿ ಮಳೆ ಆಗುತ್ತಿದ್ದು, ಮಳೆಯಿಂದಾಗಿ ‘ಸಿರಿಮನೆ ಜಲಪಾತ’ ಮತ್ತೆ ಜೀವ ಕಳೆ ಪಡೆದಿದೆ. ಶೃಂಗೇರಿ(Sringeri) ತಾಲೂಕಿನ ಕಿಗ್ಗಾ ಸಿರಿಮನೆ ಜಲಪಾತ(Sirimane Falls), ಇದೀಗ ಹಾಲ್ನೊರೆಯಂತೆ ಉಕ್ಕಿ ಹರಿಯುತ್ತಿದೆ. ಕೆರೆಕಟ್ಟೆ ಘಟ್ಟಪ್ರದೇಶದಲ್ಲಿ 15 ದಿನಗಳಿಂದ ನಿರಂತ ಮಳೆಯಾಗಿದೆ. ಹೀಗಾಗಿ ಉತ್ತಮ ಮಳೆಯಿಂದಾಗಿ ಜಲಪಾತದ ನೀರಿನ ಮಟ್ಟ ಏರಿಕೆ ಆಗಿದ್ದು, ನೋಡುಗರನ್ನು ಒಮ್ಮೆ ಮಂತ್ರಮುಗ್ದರನ್ನಾಗಿಸುತ್ತದೆ. ಈ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದು, ಜಲಪಾತದ ನೀರಿನಲ್ಲಿ ಆಟವಾಡಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ದಿನನಿತ್ಯದ ಜಂಜಾಟದಲ್ಲಿ ಬಳಲಿದ್ದವರು, ಇಲ್ಲಿ ಬಂದು ಕೊಂಚ ರಿಲ್ಯಾಕ್ಷ್​ ಆಗುತ್ತಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on