ಶಿರಸಿ ಪೊಲೀಸರ ಭರ್ಜರಿ ಬೇಟೆ: 9 ಅಂತರ್ ಜಿಲ್ಲಾ ಕಳ್ಳರ ಬಂಧನ, 13,80,000 ರೂ. ನಗದು, 2 ಕಾರು, 12 ಮೊಬೈಲ್ ಜಪ್ತಿ
ಬೆಳಗಾವಿಯಿಂದ ಬನವಾಸಿಗೆ ಬರುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿ 50 ಲಕ್ಷ ಹಣ ದರೋಡೆ ಮಾಡಿದ್ದ ಖದೀಮರು ಇದೀಗ ಖಾಕಿ ಬಲೆ ಬಿದ್ದಿದ್ದಾರೆ.
ಶಿರಸಿ: ಬೆಳಗಾವಿಯಿಂದ ಬನವಾಸಿಗೆ ಬರುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿ 50 ಲಕ್ಷ ಹಣ ದರೋಡೆ ಮಾಡಿದ್ದ ಖದೀಮರು ಇದೀಗ ಖಾಕಿ ಬಲೆ ಬಿದ್ದಿದ್ದಾರೆ. ಬೆಳಗಾವಿಗೆ ಸೈಟ್ ಖರೀದಿಸಲು ತೆರಳಿ ಹೋಗಿ ಬರುತ್ತಿದ್ದಾಗ ಖದೀಮರು ದಾಳಿ ಮಾಡಿದ್ದು, ಕಾರಿನಲ್ಲಿದ್ದ 50 ಲಕ್ಷ ರೂ, ದೋಚಿಕೊಂಡು ಹೋಗಿದ್ದರು.
ಈ ಪ್ರಕರಣದ ಬೆನ್ನತ್ತಿದ್ದ ಶಿರಸಿ ಪೊಲೀಸರು, 9 ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಶಿವಮೊಗ್ಗ, ಚಿಕ್ಕಮಗಳೂರು, ಭಟ್ಕಳ ಮೂಲದವರು. ಇನ್ನು ಬಂಧಿತರಿಂದ 13,80,000 ರೂ. ನಗದು 2 ಕಾರು, 12 ಮೊಬೈಲ್ ಜಪ್ತಿ ಮಾಡಿದ್ದಾರೆ.
Loading...
Unable to load recommendations.
Follow Us
