ಮಳೆ ಸೃಷ್ಟಿಸಿರುವ ಅವಾಂತರಗಳನ್ನು ಬಿಬಿಎಂಪಿ ವಾರ್​ರೂಮಲ್ಲಿ ಕೂತು ನೋಡಿದರೆ ಪರಿಹಾರಗಳು ಸಿಗುತ್ತವೆಯೇ?

ಅರುಣ್​ ಕುಮಾರ್​ ಬೆಳ್ಳಿ

Updated on: May 19, 2025 | 8:34 PM

ತಪ್ಪೆಲ್ಲ ಅಧಿಕಾರಿಗಳದ್ದೇ ಎಂಬಂತೆ ಮುಖ್ಯಮಂತ್ರಿ ಮಾತಾಡುತ್ತಾರೆ, ಆಫ್ ಕೋರ್ಸ್ ಅಧಿಕಾರಿಗಳ ಬೇಜವಾಬ್ದಾರಿತನ, ಉಡಾಫೆ ಮಾತು ಬೆಂಗಳೂರು ನಿವಾಸಿಗಳಿಗೆ ಅರ್ಥವಾಗುತ್ತಿದೆ. ಆದರೆ ಸರ್ಕಾರ ಏನು ಮಾಡುತ್ತಿದೆ, ರಾಜ್ಯದ ರಾಜಧಾನಿಯನ್ನು ಈ ಸ್ಥಿತಿಯಲ್ಲಿಟ್ಟುಕೊಂಡು ದೂರದ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಮಾಡಿದರೆ ಅದಕ್ಕೇನಾದರೂ ಅರ್ಥವಿದೆಯಾ ಎಂದು ಕನ್ನಡಿಗರು ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರು ಮೇ 19: ಈಗಾಗಲೇ ವರದಿಯಾಗಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಡಿಸಿಎಂ ಡಿಕೆ ಶಿವಕುಮಾರ್, ಮತ್ತು ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಜೊತೆ ಕೂತು ಬೆಂಗಳೂರು ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾದ (torrential rains in Bengaluru) ಸಮಸ್ಯೆಗಳನ್ನು ವೀಕ್ಷಿಸಿದರು. ನಂತರ ಸಿದ್ದರಾಮಯ್ಯ ಬಿಬಿಎಂಪಿ ಅಧಿಕಾರಿಯೊಬ್ಬರಿಗೆ ಮಳೆಗಾಲಕ್ಕೆ ಮೊದಲಿನ ಸಿದ್ಧತೆಗಳ ಬಗ್ಗೆ ವಿಚಾರಿಸಿದರು. ಈ ಅಧಿಕಾರಿ ಕೇಳಿದ್ದಕ್ಕೆಲ್ಲ ಗೋಣು ಆಡಿಸುತ್ತಾರೆ. ಮೇನಲ್ಲಿ ಮಳೆಯಾಗುತ್ತದೆ ಅಂತ ಗೊತ್ತಿದ್ದರೂ ಪೂರ್ವಸಿದ್ಧತೆಗಳನ್ನು ಯಾಕೆ ಮಾಡಿಕೊಂಡಿಲ್ಲ ಅಂತ ಕೇಳಿದರೆ ಓಕೆ ಸರ್ ಅಂತ ತಲೆಯಾಡಿಸುತ್ತಾರೆ!

ಇದನ್ನೂ ಓದಿ:   ಏನು ಸಾಧನೆ ಮಾಡಿದ್ದಾರೆ ಅಂತ ಸಿದ್ದರಾಮಯ್ಯ ಸಾಧನಾ ಸಮಾವೇಶ ಮಾಡುತ್ತಿದ್ದಾರೆ? ಹೆಚ್ ವಿಶ್ವನಾಥ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.