ಒಂದಿಂಚು ಬೋಲ್ಟ್ ನುಂಗಿದ ಬಾಲಕ, ಶಸ್ತ್ರಚಿಕಿತ್ಸೆ ಮಾಡದೆ ಅದನ್ನು ಹೊರಗೆ ತೆಗೆದಿದ್ದು ಹೇಗೆ? ವಿಡಿಯೋ ನೋಡಿ!
ಯಾವುದೇ ಶಸ್ತ್ರ ಚಿಕಿತ್ಸೆ ಮಾಡದೆ ಎಂಡೋಸ್ಕೋಪಿ ಮೂಲಕ ಈ ಬೋಲ್ಟ್ ಅನ್ನು ಹೊರತೆಗೆಯಲಾಗಿದೆ. ಇದರಿಂದ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಎಂಡೋಸ್ಕೋಪಿ ಮೂಲಕ ಬೋಲ್ಟ್ ತೆಗೆಯುತ್ತಿರುವ ವಿಡಿಯೋ ನೋಡಿದ ಜನ ಶಾಕ್ ಆಗಿದ್ದಾರೆ. ನೀವೂ ಆ ವಿಡಿಯೋವನ್ನು ಒಮ್ಮೆ ನೋಡಿ.
ಪೋಷಕರು ಎಷ್ಟು ಜಾಗರೂಕರಾಗಿರಬೇಕು? ಕೆಲವು ಸಂದರ್ಭಗಳಲ್ಲಿ ಮಕ್ಕಳ ಅಚಾತುರ್ಯದ ಕ್ರಿಯೆಗಳು ಅಪಾಯಗಳಿಗೆ ಕಾರಣವಾಗಬಹುದು. ಗೊತ್ತಿಲ್ಲದ ಕೆಲಸಗಳನ್ನು ಮಾಡುವುದು ಅವರ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಇತ್ತೀಚೆಗೆ ಖಮ್ಮಮ್ ಜಿಲ್ಲೆಯಲ್ಲಿ ನಡೆದ ಘಟನೆಯು ಮಕ್ಕಳ ಬಗ್ಗೆ ಎಷ್ಟೆಲ್ಲಾ ಕಾಳಜಿ ವಹಿಸಬೇಕು ಎಂಬುದನ್ನು ತೋರಿಸುತ್ತದೆ.
ವಿವರಗಳಿಗೆ ಹೋದರೆ… ಖಮ್ಮಂ ಜಿಲ್ಲೆ ಕೂಸುಮಂಚಿ ಮಂಡಲಕ್ಕೆ ಸೇರಿದ ಬದ್ವತ್ ಹರ್ಷ್ ಎಂಬ ಆರು ವರ್ಷದ ಬಾಲಕ ಆಟವಾಡುತ್ತಿದ್ದಾಗ ಒಂದಿಂಚು ಉದ್ದದ ಇಡೀ ಬೋಲ್ಟ್ ಅನ್ನು ನುಂಗಿಬಿಟ್ಟಿದ್ದಾನೆ. ಇದನ್ನು ನೋಡಿದ ಮಗುವಿನ ಪೋಷಕರು ಆತಂಕಗೊಂಡಿದ್ದಾರೆ. ಆ ಬಳಿಕ ತಡಮಾಡದೆ ಬಾಲಕನನ್ನು ಖಮ್ಮಂ ಪಟ್ಟಣದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊದಲು ಎಕ್ಸ್ ರೇ ತೆಗೆಯಲಾಗಿದ್ದು, ಬೋಲ್ಟ್ ಒಳಗೆ ಹೋಗಿರುವುದು ಖಚಿತಪಟ್ಟಿದೆ.
ನಂತರ, ಯಾವುದೇ ಶಸ್ತ್ರ ಚಿಕಿತ್ಸೆ ಮಾಡದೆ ಎಂಡೋಸ್ಕೋಪಿ ಮೂಲಕ ಈ ಬೋಲ್ಟ್ ಅನ್ನು ಹೊರತೆಗೆಯಲಾಯಿತು. ಇದರಿಂದ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮಗನ ಜೀವ ಉಳಿಸಿದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಈ ಅವಧಿಯಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ ಎಂದು ವೈದ್ಯ ಡಾ. ಜಂಗಲ್ ಸುನೀಲ್ ಕುಮಾರ್ ತಿಳಿಸಿದರು. ತಮ್ಮ ಬಳಿ ಈ ರೀತಿಯ 4 ಪ್ರಕರಣಗಳು ಬಂದಿದ್ದು, ಆಗಲೂ ಮಕ್ಕಳನ್ನು ಇದೇ ರೀತಿ ಬಚಾವ್ ಮಾಡಿರುವುದಾಗಿ ತಿಳಿಸಿದ್ದಾರೆ.
ಮಕ್ಕಳ ವಿಚಾರದಲ್ಲಿ ಪೋಷಕರು ತುಂಬಾ ಜಾಗರೂಕರಾಗಿರಬೇಕು ಎಂದು ವೈದ್ಯರು ಇದೆ ವೇಳೆ ಸಲಹೆ ನೀಡುತ್ತಾರೆ. ಮಕ್ಕಳು ಆಟವಾಡುವಾಗ ಅವರ ಮೇಲೆ ಸದಾ ನಿಗಾ ಇಡಬೇಕು ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ವೈದ್ಯರು ಎಂಡೋಸ್ಕೋಪಿ ಮೂಲಕ ಬೋಲ್ಟ್ ತೆಗೆಯುತ್ತಿರುವ ವಿಡಿಯೋ ನೋಡಿದ ಜನ ಶಾಕ್ ಆಗಿದ್ದಾರೆ. ನೀವೂ ಆ ವಿಡಿಯೋವನ್ನು ಒಮ್ಮೆ ನೋಡಿ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ