ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿಗೆ ಅಯೋಧ್ಯೆ ಶ್ರೀರಾಮ ಮಂತ್ರಾಕ್ಷತೆ ನೀಡಿದ ವಿಹೆಚ್​​ಪಿ

ಕೊಪ್ಪಳ ಗವಿಸಿದ್ದೇಶ್ವರ ಸ್ವಾಮೀಜಿಗೆ ಅಯೋಧ್ಯೆ ಶ್ರೀರಾಮ ಮಂತ್ರಾಕ್ಷತೆ ನೀಡಿದ ವಿಹೆಚ್​​ಪಿ

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ವಿವೇಕ ಬಿರಾದಾರ

Updated on: Jan 06, 2024 | 9:55 AM

ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ವಿಶ್ವ ಹಿಂದು ಪರಿಷತ್ ಸಂಘಟನೆ ಕಾರ್ಯಕರ್ತರು ಅಯೋಧ್ಯೆ ಶ್ರೀರಾಮ ಮಂತ್ರಾಕ್ಷತೆ ನೀಡಿದರು. ಜನೆವರಿ 22 ರಂದು ಅಯೋದ್ಯೆ ರಾಮಮಂದಿರ ಉದ್ಘಾಟನೆ ಮತ್ತು ಬಾಲ ರಾಮನ ಪ್ರತಿಷ್ಠಾಪಿಸಲಾಗುತ್ತದೆ. ಹೀಗಾಗಿ ಅಯೋಧ್ಯೆಯಿಂದ ಮಂತ್ರಾಕ್ಷತೆ ದೇಶದ ಎಲ್ಲ ರಾಜ್ಯಗಳಿಗೆ ತಲುಪಿವೆ.

ಕೊಪ್ಪಳ, ಜನವರಿ 05: ಗವಿಸಿದ್ದೇಶ್ವರ (Gavisiddeshwar) ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ (Abhinav Gavisiddeshwar Swamiji) ವಿಶ್ವ ಹಿಂದು ಪರಿಷತ್ (VHP) ಸಂಘಟನೆ ಕಾರ್ಯಕರ್ತರು ಅಯೋಧ್ಯೆ (Ayodhye) ಶ್ರೀರಾಮ ಮಂತ್ರಾಕ್ಷತೆ ನೀಡಿದರು. ಜನೆವರಿ 22 ರಂದು ಅಯೋದ್ಯೆ ರಾಮಮಂದಿರ ಉದ್ಘಾಟನೆ ಮತ್ತು ಬಾಲ ರಾಮನ ಪ್ರತಿಷ್ಠಾಪಿಸಲಾಗುತ್ತದೆ. ಹೀಗಾಗಿ ಅಯೋಧ್ಯೆಯಿಂದ ಮಂತ್ರಾಕ್ಷತೆ ದೇಶದ ಎಲ್ಲ ರಾಜ್ಯಗಳಿಗೆ ತಲುಪಿವೆ. ಈ ಮಂತ್ರಾಕ್ಷತೆಗಳನ್ನು ಹಿಂದೂ ಸಂಘಟನೆಗಳು ದೇಶಾದ್ಯಂತ ವಿತರಣೆ ಮಾಡುತ್ತಿವೆ. ಹಿಂದೂ ಸಂಘಟನೆಗಳು ಮನೆ ಮನೆಗೂ ತೆರಳಿ ಮಂತ್ರಾಕ್ಷತೆಯನ್ನು ನೀಡುತ್ತಿವೆ.