ಇಂದು ಸ್ಕಂದ ಷಷ್ಠಿ: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ

Updated on: Jul 20, 2026 | 6:26 AM

2026ರ ಜುಲೈ 20ರ ದಿನ ಭವಿಷ್ಯವನ್ನು ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ಈ ದಿನ ಸ್ಕಂದ ಷಷ್ಠಿ ಮತ್ತು ನಾರಾಯಣ ಜಯಂತ್ಯೋತ್ಸವದ ವಿಶೇಷ ಮಹತ್ವವನ್ನು ಹೊಂದಿದ್ದು, ಮೇಷ ರಾಶಿಯವರಿಗೆ ಆರ್ಥಿಕ ಸುಧಾರಣೆ, ಮಾನಸಿಕ ತೃಪ್ತಿ, ವ್ಯಾಪಾರ-ವ್ಯವಹಾರಗಳಲ್ಲಿ ಯಶಸ್ಸು ಮತ್ತು ಅನೀರಿಕ್ಷಿತ ಪ್ರಯಾಣ ಯೋಗವನ್ನು ಸೂಚಿಸುತ್ತದೆ. ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ.

ಇಂದು 2026ರ ಜುಲೈ 20ರ ಸೋಮವಾರ, ಪರಾಭವನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಶುಕ್ಲ ಪಕ್ಷ ಷಷ್ಠಿ ಹಾಗೂ ಹಸ್ತಾ ನಕ್ಷತ್ರದಿಂದ ಕೂಡಿದೆ. ಬೆಳಗ್ಗೆ 7:37 ರಿಂದ 9:13ರವರೆಗೆ ರಾಹುಕಾಲವಿರುತ್ತದೆ. ಇಂದು ಸ್ಕಂದ ಷಷ್ಠಿ ಮಹಾ ಪರ್ವ ದಿನವಾಗಿದ್ದು, ಮಕ್ಕಳ ಆರೋಗ್ಯ ಮತ್ತು ಕುಜ ದೋಷ ನಿವಾರಣೆಗಾಗಿ ಸುಬ್ರಹ್ಮಣ್ಯನ ದರ್ಶನ, ಹುತ್ತಕ್ಕೆ ಪೂಜೆ ಮತ್ತು ಹುತ್ತದ ಮಣ್ಣಿನ ಸ್ನಾನ ಮಾಡುವುದು ಶುಭ. ಅಲ್ಲದೆ, ನಾರಾಯಣ ಭಗವಾನ್ ಜಯಂತ್ಯೋತ್ಸವವೂ ಇದೆ. ರವಿ ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರ ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More