ಕೇವಲ ಸಾಹಿತಿ ಮಾತ್ರವಲ್ಲ, ಗ್ರಾಮಸ್ಥರ ಪಾಲಿಗೆ ಭಗೀರಥರಾಗಿದ್ದ ಎಸ್​​​ ಎಲ್ ಭೈರಪ್ಪ

Updated By: ರಮೇಶ್ ಬಿ. ಜವಳಗೇರಾ

Updated on: Sep 25, 2025 | 3:12 PM

ಸರಸ್ವತಿ ಸಮ್ಮಾನ್ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಅವರ ಹುಟ್ಟೂರಾದ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ ಆಳವಾದ ದುಃಖ ಮತ್ತು ನೀರವ ಮೌನ ಆವರಿಸಿದೆ. ಇಡೀ ಗ್ರಾಮವು ತಮ್ಮ ಹೆಮ್ಮೆಯ ಪುತ್ರನ ಅಗಲಿಕೆಯಿಂದ ಶೋಕಸಾಗರದಲ್ಲಿ ಮುಳುಗಿದೆ. ಭೈರಪ್ಪ ಅವರು ಕೇವಲ ಸಾಹಿತಿಯಾಗಿ ಮಾತ್ರವಲ್ಲದೆ, ತಮ್ಮ ಗ್ರಾಮಕ್ಕೆ ಕೊಡುಗೆ ನೀಡಿದ್ದಾರೆ

ಹಾಸನ, (ಸೆಪ್ಟೆಂಬರ್ 25): ಸರಸ್ವತಿ ಸಮ್ಮಾನ್ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ, ಖ್ಯಾತ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಅವರ ಹುಟ್ಟೂರಾದ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ ಆಳವಾದ ದುಃಖ ಮತ್ತು ನೀರವ ಮೌನ ಆವರಿಸಿದೆ. ಇಡೀ ಗ್ರಾಮವು ತಮ್ಮ ಹೆಮ್ಮೆಯ ಪುತ್ರನ ಅಗಲಿಕೆಯಿಂದ ಶೋಕಸಾಗರದಲ್ಲಿ ಮುಳುಗಿದೆ. ಭೈರಪ್ಪ ಅವರು ಕೇವಲ ಸಾಹಿತಿಯಾಗಿ ಮಾತ್ರವಲ್ಲದೆ, ತಮ್ಮ ಗ್ರಾಮಕ್ಕೆ ಕೊಡುಗೆ ನೀಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಸಂತೇಶಿವರ ಅಭಿವೃದ್ಧಿಗಾಗಿ 25 ಕೋಟಿ ರೂ. ಹಣ ಬಿಡುಗಡೆಯಾಗುವಂತೆ ಶ್ರಮಿಸಿದ್ದರು. ಈ ಅನುದಾನದಲ್ಲಿ, ಸಂತೇಶಿವರ ಕೆರೆಯಿಂದ ಸುತ್ತಮುತ್ತಲ 20 ಕೆರೆಗಳಿಗೆ ನೀರು ತುಂಬಿಸುವ 20 ಕೋಟಿ ರೂ. ಯೋಜನೆಯು ಈಗಾಗಲೇ ಪೂರ್ಣಗೊಂಡಿದೆ.

Published on: Sep 25, 2025 03:10 PM