ಭೈರಪ್ಪನವರ ಮನೆಯ ಹತ್ತಿರ ಬಾರ್: ಆ ಘಟನೆ ನೆನೆದ ಸ್ಥಳೀಯರು
ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ(94) ನಿಧನ ಹೊಂದಿದ್ದಾರೆ. ಮೈಸೂರಿನ ಕುವೆಂಪು ನಗರದಲ್ಲಿನ ನಿವಾಸಿಗಳು ಅವರ ಅಗಲಿಕೆಯ ಬೇಸರ ವ್ಯಕ್ತಪಡಿಸಿದ್ದಾರೆ. ಭೈರಪ್ಪನವರು ಕೇವಲ ಸಾಹಿತಿಯಾಗಿರದೆ ಸಮಾಜ ಸುಧಾರಣೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು ಎಂದು ಅಲ್ಲಿನ ನಿವಾಸಿಗಳು ಹೇಳೀದ್ದಾರೆ. ಈ ವೀಡಿಯೋ ನೋಡಿ.
ಮೈಸೂರು, ಸೆಪ್ಟೆಂಬರ್24: ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಪದ್ಮಭೂಷಣ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ(94) ನಿಧನ ಹೊಂದಿದ್ದಾರೆ.ಭೈರಪ್ಪನವರು ಕೇವಲ ಸಾಹಿತಿಯಾಗಿರದೇ ಸಮಾಜ ಸುಧಾರಣೆಯ ಕಾರ್ಯಗಳಲ್ಲೂ ಕೈ ಜೋಡಿಸಿದವರು. ಮೈಸೂರಿನ ಕುವೆಂಪು ನಗರದಲ್ಲಿದ್ದಾಗ ಅವರ ಮನೆಯ ಹಿಂದೆಯೇ ತೆರೆಯಲಿದ್ದ ಬಾರನ್ನು ವಿರೋಧೀಸಿ, ಅಲ್ಲಿನ ನಿವಾಸಿಗಳೂಂದಗೆ ಹೋರಾಟದಲ್ಲೂ ಭಾಗಿಯಾಗಿದ್ದರು. ಈಗ ಅವರನ್ನು ಕಳೆದುಕೊಂಡು ಅನಾಥ ಪ್ರಜ್ಞೆ ಕಾಡುತ್ತಿದೆಯೆಂದು ಮೈಸೂರಿನಲ್ಲಿನ ಅವರ ನೆರೆ ಹೊರೆಯವರು ಹೇಳಿದ್ದಾರೆ. ವೀಡಿಯೋ ನೋಡಿ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
