SM Krishna No More; ಕಳಂಕರಹಿತ ರಾಜಕಾರಣಿ ಮತ್ತು ಅಜಾತಶತ್ರು ಕೃಷ್ಣರ ಕೈ-ಬಾಯಿ ಶುದ್ಧವಾಗಿತ್ತು: ಇಬ್ರಾಹಿಂ

|

Updated on: Dec 10, 2024 | 5:11 PM

SM Krishna No More: ರಾಜ್ಯ ಸರ್ಕಾರವು ಎಸ್ ಎಂ ಕೃಷ್ಣ ಸೇರಿದಂತೆ ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ವೀರೇಂದ್ರ ಪಾಟೀಲ್ ಮೊದಲಾದ ಧೀಮಂತ ನಾಯಕರನ್ನು ಕುರಿತ ಪಾಠಗಳನ್ನು ಶಾಲಾ ಪಠ್ಯಕ್ರಮಕ್ಕೆ ಸೇರಿಸಬೇಕೆಂದು ಅಗ್ರಹಿಸುವುದಾಗಿ ಹೇಳಿದ ಇಬ್ರಾಹಿಂ, ವಿಧಾನಸೌಧದ ಆವರಣದಲ್ಲಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆಯ ಎದುರುಗಡೆ ಕೃಷ್ಣ ಅವರ ಪ್ರತಿಮೆ ಸ್ಥಾಪಿಸಬೇಕೆಂದರು.

ಬೆಂಗಳೂರು: ಎಸ್​ಎಂ ಕೃಷ್ಣ ಒಬ್ಬ ಕಳಂಕರಹಿತ ರಾಜಕಾರಣಿ ಮತ್ತು ಅಜಾತಶತ್ರು ಎಂದು ಅವರೊಂದಿಗೆ ಒಟ್ಟಿಗೆ ರಾಜ್ಯಸಭೆ ಪ್ರವೇಶಿಸಿದ್ದ ಹಿರಿಯ ರಾಜಕಾರಣಿ ಸಿಎಂ ಇಬ್ರಾಹಿಂ ಹೇಳಿದರು. ಇವತ್ತು ಬೆಂಗಳೂರು ಸಿಲಿಕಾನ್ ವ್ಯಾಲಿ ಅಂತ ಕರೆಸಿಕೊಳ್ಳಲು ಅವರೇ ಕಾರಣ ಮತ್ತು ಕರ್ನಾಟಕವನ್ನು ಇಡೀ ವಿಶ್ವಕ್ಕೆ ಮಾದರಿಯಾಗಿ ನಿಲ್ಲಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು. ಕೈ ಮತ್ತು ಬಾಯಿ ಶುದ್ಧವಾಗಿಟ್ಟುಕೊಂಡಿದ್ದ ಕೃಷ್ಣ ಅವರು ಬೇರೆ ರಾಜಕಾರಣಿಗಳ ಹಾಗೆ ದುಡ್ಡು ಮಾಡಿಕೊಂಡವರಲ್ಲ, ಇವರೊಂದಿಗಿದ್ದವರು ದುಡ್ಡು ಮಾಡಿಕೊಂಡರೆನ್ನುವುದು ಬೇರೆ ವಿಚಾರ ಎಂದು ಇಬ್ರಾಹಿಂ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: SM Krishna No More: ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಎಸ್​ಎಂ ಕೃಷ್ಣ ಅವರು ನೀಡಿದ ಕೊಡುಗೆ ಅಪರಿಮಿತವಾದದ್ದು: ಹೆಚ್ ಡಿ ಕುಮಾರಸ್ವಾಮಿ