SM Krishna No More: ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಎಸ್​ಎಂ ಕೃಷ್ಣ ಅವರು ನೀಡಿದ ಕೊಡುಗೆ ಅಪರಿಮಿತವಾದದ್ದು: ಹೆಚ್ ಡಿ ಕುಮಾರಸ್ವಾಮಿ

SM Krishna No More: ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಎಸ್​ಎಂ ಕೃಷ್ಣ ಅವರು ನೀಡಿದ ಕೊಡುಗೆ ಅಪರಿಮಿತವಾದದ್ದು: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 10, 2024 | 4:10 PM

ತಾನು ಎಸ್ ಎಂ ಕೃಷ್ಣ ಅವರ ಸಮಕಾಲೀನನಲ್ಲ ಎಂದು ಹೇಳಿದ ಕುಮಾರಸ್ವಾಮಿ, ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದೆ ಮತ್ತು ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದಾಗ ಈಗ ನಮ್ಮೊಂದಿಗಿರದ ನಂಜೇಗೌಡರ ಮನೆಯಲ್ಲಿ ಕೃಷ್ಣ ಅವರನ್ನು ಭೇಟಿಯಾಗಿದ್ದೆ ಎಂದು ಹೇಳಿದರು.

ದೆಹಲಿ: ಸಂಸತ್ತಿನ ಅಧಿವೇಶನದಲ್ಲಿ ಭಾಗಿಯಾಗಲು ದೆಹಲಿಯಲ್ಲಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಅಗಲಿದ ಹಿರಿಯ ನಾಯಕ ನಾಯಕ ಎಸ್ ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಮುಖ್ಯಮಂತ್ರಿಯಾಗಿ ಮತ್ತು ಕೇಂದ್ರದಲ್ಲಿ ವಿದೇಶಾಂಗ ಖಾತೆ ಸಚಿವರಾಗಿ ಅವರು ರಾಜ್ಯ ಮತ್ತು ರಾಷ್ಟ್ರಕ್ಕೆ ನೀಡಿದ ಕೊಡುಗೆ ದೊಡ್ಡದು, ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅವರ ಅನೇಕ ನಿರ್ಣಯಗಳು ಕಾರಣವಾದವು, ಇವತ್ತಿನ ಯುವ ರಾಜಕಾರಣಿಗಳಿಗೆ ಅವರು ಆದರ್ಶಪ್ರಾಯರಾಗಿದ್ದಾರೆ, ಅವರಿಂದ ಕಲಿಯುವುದು ಬಹಳವಿದೆ, ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲೆಂದು ಪ್ರಾರ್ಥಿಸುವೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಎಸ್​ಎಂ ಕೃಷ್ಣ ಅಂತ್ಯಕ್ರಿಯೆ ವಿಧಿ ವಿಧಾನ ಹೇಗಿರುತ್ತೆ? ಯಾರು ನೆರವೇರಿಸಲಿದ್ದಾರೆ? ಇಲ್ಲಿದೆ ವಿವರ