Sign In

By signing in or creating an account, you agree with Associated Broadcasting Company's Terms & Conditions and Privacy Policy.

SM Krishna No More; ಕೃಷ್ಣ ಅವರಿಂದಾಗೇ ಸದನದಲ್ಲಿ ನಿಂತು ಮಾತಾಡುತ್ತಿರುವುದು ಸಾಧ್ಯವಾಗಿದೆ: ಜಮೀರ್ ಅಹ್ಮದ್ ಖಾನ್

SM Krishna No More; ಕೃಷ್ಣ ಅವರಿಂದಾಗೇ ಸದನದಲ್ಲಿ ನಿಂತು ಮಾತಾಡುತ್ತಿರುವುದು ಸಾಧ್ಯವಾಗಿದೆ: ಜಮೀರ್ ಅಹ್ಮದ್ ಖಾನ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 10, 2024 | 2:50 PM

ಅವರ ಸಾವಿನ ಸುದ್ದಿ ಆಘಾತಕಾರಿ, ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಅವಧಿಯಿಂದ ಅವರೊಂದಿಗೆ ಒಡನಾಟವಿತ್ತು, 90 ರ ದಶಕದಲ್ಲಿ ಅವರ ಪರ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೆ, ಟ್ರಾನ್ಸ್​ಪೋರ್ಟ್ ಕಚೇರಿಯ ಉದ್ಘಾಟನಗೆ ಕರೆದಾಗ ಅವರು ಬಂದು ಸುಮಾರು ಒಂದು ತಾಸು ತನ್ನೊಂದಿಗಿದ್ದು ಆಶೀರ್ವದಿಸಿದ್ದರು ಎಂದು ಜಮೀರ್ ಅಹ್ಮದ್ ಹೇಳಿದರು.

ಬೆಳಗಾವಿ: ವಸತಿ ಮತ್ತು ವಕ್ಫ್ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಸದನದಲ್ಲಿಂದು ಅಗಲಿದ ಹಿರಿಯ ನಾಯಕ ಎಸ್ ಎಂ ಕೃಷ್ಟ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ತಾನು ಇವತ್ತು ಸದನದಲ್ಲಿ ನಿಲ್ಲಲು ಅವರೇ ಕಾರಣ, ಯಾಕೆಂದರೆ 2004 ಅಸೆಂಬ್ಲಿ ಚುನಾವಣೆಯಲ್ಲಿ ಜಯನಗರದಲ್ಲಿ ರಾಮಲಿಂಗಾರೆಡ್ಡಿ ವಿರುದ್ಧ ಸ್ಪರ್ಧಿಸಿ ಸೋತಿದ್ದೆ, ಆದರೆ ಅದೇ ಸಮಯಕ್ಕೆ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ತೆರಳಿದ್ದರಿಂದ ಅವರು ಸ್ಪರ್ಧಿಸಿದ ಚಾಮರಾಜಪೇಟೆ ಕ್ಷೇತ್ರ ತೆರವಾಗಿತ್ತು, ತಾನು ಅಲ್ಲಿಂದ ಸ್ಪರ್ಧಿಸಿ ವಿಧಾನ ಸಭೆಗೆ ಆಯ್ಕೆಯಾಗಿದ್ದೆ ಮತ್ತು ತಾನು ಗೆದ್ದ ವಿಷಯವನ್ನು ಸಹ ಅವರೇ ಫೋನ್ ಮಾಡಿ ತಿಳಿಸಿದ್ದರು ಎಂದು ಜಮೀರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ದೇವೇಗೌಡರ ಕುಟುಂಬವನ್ನು ಖರೀದಿಸುವ ಮಾತು ನಾನಾಡಿಲ್ಲ: ಜಮೀರ್ ಅಹ್ಮದ್ ಖಾನ್