ರೆಡ್ ಬಾಲ್ ಟೆಸ್ಟ್​ಗಾಗಿ ಅಭ್ಯಾಸ ಶುರು ಮಾಡಿದ ಟೀಮ್ ಇಂಡಿಯಾ

ರೆಡ್ ಬಾಲ್ ಟೆಸ್ಟ್​ಗಾಗಿ ಅಭ್ಯಾಸ ಶುರು ಮಾಡಿದ ಟೀಮ್ ಇಂಡಿಯಾ

ಝಾಹಿರ್ ಯೂಸುಫ್
|

Updated on:Dec 10, 2024 | 2:37 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯವು ಡಿಸೆಂಬರ್ 14 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಬ್ರಿಸ್ಬೇನ್​ನ ಗಾಬ್ಬಾ ಮೈದಾನ ಆತಿಥ್ಯವಹಿಸಲಿದೆ. ಇದಕ್ಕೂ ಮುನ್ನ ಪರ್ತ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ತಂಡ 295 ರನ್​​ಗಳ ಅಮೋಘ ಗೆಲುವು ದಾಖಲಿಸಿದರೆ, ಅಡಿಲೇಡ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ 10 ವಿಕೆಟ್​​ಗಳ ಜಯ ಸಾಧಿಸಿದೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಅಭ್ಯಾಸ ಶುರು ಮಾಡಿದೆ. ಬ್ರಿಸ್ಬೇನ್​​ನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ತೆರಳುವ ಮುನ್ನವೇ ಭಾರತೀಯ ಆಟಗಾರರು ಅಡಿಲೇಡ್​ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಈ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಈ ಪಂದ್ಯವನ್ನು ರೆಡ್ ಬಾಲ್​ನಲ್ಲಿ ಆಡಲಾಗುತ್ತದೆ. ಅಡಿಲೇಡ್​ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಿಂಕ್ ಬಾಲ್ ಬಳಸಲಾಗಿತ್ತು. ಆ ಪಂದ್ಯವು ಡೇ-ನೈಟ್ ಟೆಸ್ಟ್ ಆಗಿದ್ದರಿಂದ ಪಿಂಕ್ ಬಾಲ್​​ನಲ್ಲಿ ಆಡಿಲಾಗಿತ್ತು. ಮೂರನೇ ಪಂದ್ಯವು ಸಾಮಾನ್ಯ ಟೆಸ್ಟ್ ಪಂದ್ಯವಾಗಿದ್ದು, ಅದರಂತೆ ಈ ಮ್ಯಾಚ್​ನಲ್ಲಿ ಎಂದಿನಂತೆ ರೆಡ್ ಬಾಲ್ ಬಳಸಲಾಗುತ್ತದೆ.

ಅಂದಹಾಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೂರನೇ ಪಂದ್ಯವು ಡಿಸೆಂಬರ್ 14 ರಿಂದ ಶುರುವಾಗಲಿದ್ದು, ಈ ಪಂದ್ಯಕ್ಕೆ ಬ್ರಿಸ್ಬೇನ್​ನ ಗಾಬ್ಬಾ ಮೈದಾನ ಆತಿಥ್ಯವಹಿಸಲಿದೆ. ಇದಕ್ಕೂ ಮುನ್ನ ಪರ್ತ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ 295 ರನ್​​ಗಳ ಅಮೋಘ ಗೆಲುವು ದಾಖಲಿಸಿತ್ತು.

ಇನ್ನು ಅಡಿಲೇಡ್​​ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು 10 ವಿಕೆಟ್​ಗಳಿಂದ ಸೋಲಿಸಿ ಆಸ್ಟ್ರೇಲಿಯಾ ಕಂಬ್ಯಾಕ್ ಮಾಡಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದೆ. ಇದೀಗ ಉಭಯ ತಂಡಗಳು ಮೂರನೇ ಪಂದ್ಯಕ್ಕಾಗಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಸರಣಿಯಲ್ಲಿ ಮುನ್ನಡೆ ಸಾಧಿಸಲಿದೆ.

 

Published on: Dec 10, 2024 02:35 PM