ಇದೀಗ ಆರ್ಥಿಕ ಸಂಕಷ್ಟದೊಂದಿಗೆ ಅನಾರೋಗ್ಯಕ್ಕೀಡಾಗಿರುವ ವಿನೋದ್ ಕಾಂಬ್ಳಿ ತಮ್ಮ ಖರ್ಚು ವೆಚ್ಚಗಳನ್ನು ಈಡೇರಿಸಲು ಮತ್ತೊಬ್ಬರನ್ನು ಆಶ್ರಯಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ. ಈ ಪರಿಸ್ಥಿತಿಯನ್ನು ಮನಗಂಡಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್, ಕಾಂಬ್ಳಿ ಅವರಿಗೆ ನೆರವು ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.