Smartphone Cover: ಫೋನ್ ಬ್ಯಾಕ್ ಕವರ್​ನಲ್ಲಿ ಕಾಸು, ಎಟಿಎಂ ಮತ್ತು ಮೆಟ್ರೋ ಕಾರ್ಡ್ ಇರಿಸುತ್ತೀರಾ?

Smartphone Cover: ಫೋನ್ ಬ್ಯಾಕ್ ಕವರ್​ನಲ್ಲಿ ಕಾಸು, ಎಟಿಎಂ ಮತ್ತು ಮೆಟ್ರೋ ಕಾರ್ಡ್ ಇರಿಸುತ್ತೀರಾ?

ಕಿರಣ್​ ಐಜಿ
|

Updated on: May 30, 2024 | 7:08 AM

ಕವರ್​ನಲ್ಲಿ ಒಂದಷ್ಟು ನೋಟು, ಮೆಟ್ರೋ, ಎಟಿಎಂ ಕಾರ್ಡ್​ ಇರಿಸುತ್ತಾರೆ. ನಿಮ್ಮ ಫೋನ್‌ನ ಹಿಂಬದಿಯ ಕವರ್‌ನಲ್ಲಿ ನೀವು ಚೀಟಿ, ಹಣ ಅಥವಾ ಯಾವುದೇ ಕಾಗದದ ವಸ್ತುವನ್ನು ಇಟ್ಟುಕೊಂಡಿದ್ದರೆ ಜಾಗರೂಕರಾಗಿರಿ. ಇಲ್ಲದಿದ್ದರೆ ನಿಮಗೆ ದೊಡ್ಡ ನಷ್ಟವಾಗಬಹುದು.

ಸ್ಮಾರ್ಟ್​ಫೋನ್ ಕೊಂಡಾಗ ಅದಕ್ಕೊಂದು ಒಪ್ಪುವ ಚಂದದ ಬ್ಯಾಕ್ ಕವರ್ ಹಾಕುವುದು ರೂಢಿ. ಸಾಮಾನ್ಯವಾಗಿ ಸಿಂಪಲ್ ಕವರ್​ನಿಂದ ತೊಡಗಿ, ಬಣ್ಣಬಣ್ಣದ ಆಕರ್ಷಕ ಕವರ್​ಗಳನ್ನು ಜನರು ಬಳಸುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಆ ಕವರ್​ನಲ್ಲಿ ಒಂದಷ್ಟು ನೋಟು, ಮೆಟ್ರೋ, ಎಟಿಎಂ ಕಾರ್ಡ್​ ಇರಿಸುತ್ತಾರೆ. ನಿಮ್ಮ ಫೋನ್‌ನ ಹಿಂಬದಿಯ ಕವರ್‌ನಲ್ಲಿ ನೀವು ಚೀಟಿ, ಹಣ ಅಥವಾ ಯಾವುದೇ ಕಾಗದದ ವಸ್ತುವನ್ನು ಇಟ್ಟುಕೊಂಡಿದ್ದರೆ ಜಾಗರೂಕರಾಗಿರಿ. ಇಲ್ಲದಿದ್ದರೆ ನಿಮಗೆ ದೊಡ್ಡ ನಷ್ಟವಾಗಬಹುದು. ನಿಮ್ಮ ಫೋನ್ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಕಳೆದ ಕೆಲವು ತಿಂಗಳುಗಳಿಂದ ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳೇ ಇದಕ್ಕೆ ಕಾರಣ ಎನ್ನಬಹುದು. ವಿವರಗಳಿಗೆ ಈ ವಿಡಿಯೊ ನೋಡಿ..