ಉತ್ತಮ ಗುಣಮಟ್ಟ ಮತ್ತು 48 ಮೆಗಾ ಪಿಕ್ಸೆಲ್ ಕೆಮೆರಾ ಹೊಂದಿರುವ ಫೋನ್​​​ಗಳು ರೂ. 20,000 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 09, 2021 | 4:26 PM

ಫೋನ್​​ನಲ್ಲಿ ಅಳವಡಿಸಿದ ಕೆಮೆರಾ ಮತ್ತು ಅದರ ಸಾಮರ್ಥ್ಯ ಹೆಚ್ಚಿದಂತೆ ಅದರ ಬೆಲೆಯೂ ಜಾಸ್ತಿಯಾಗುತ್ತದೆ. ಆದರೆ 48 ಮೆಗಾ ಪಿಕ್ಸೆಲ್ ಕೆಮೆರಾ ಹೊಂದಿರುವ ಬ್ರ್ಯಾಂಡೆಡ್ ಫೋನ್​ಗಳು ರೂ. 20,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ.

ಪೋನ್​​ಗಳಲ್ಲಿ ಕೆಮೆರಾ ಅಳವಡಿಸುವುದನ್ನು ಅವುಗಳನ್ನು ತಯಾರಿಸುವ ಕಂಪನಿಗಳು ಶುರುಮಾಡಿದ ನಂತರ ಮಾಮೂಲು ಕೆಮೆರಾಗಳ ಬೇಡಿಕೆ ನಿಸ್ಸಂದೇಹವಾಗಿ ಕಮ್ಮಿಯಾಗಿದೆ ಮತ್ತು ವೃತ್ತಿಪರ ಫೋಟೋಗ್ರಾಫರ್​​ಗಳು ಸ್ಮಾರ್ಟ್​ಪೋನ್​​​ಗಳನ್ನು ಪ್ರತಿನಿತ್ಯ ಶಪಿಸುತ್ತಿದ್ದಾರೆ. ಒಂದು ಕಾಲವಿತ್ತು, ನೀವು  ಲಾಲ್​ಬಾಗ್ ಇಲ್ಲವೆ ಬೇರೆ ಯಾವುದೇ ಪ್ರವಾಸಿ ಸ್ಥಳಕ್ಕೆ ಹೋದರೆ ಫೋಟೋಗ್ರಾಫರ್ ಗಳು ನಿಮ್ಮನ್ನು ಸುತ್ತುವರಿಯುತ್ತಿದ್ದರು. ಆದರೆ ಆವರ ಸ್ಥಿತಿ ಈಗ ತಮ್ಮ ತಮ್ಮ ಪೋನ್​ಗಳಲ್ಲಿ ಸೆಲ್ಫೀಗಳನ್ನು ತೆಗೆದುಕೊಳ್ಳುವ ಜನರನ್ನು ನೋಡುತ್ತಾ ನಿಲ್ಲುವಂತಾಗಿಬಿಟ್ಟಿದೆ. ಮತ್ತೊಂದೆಡೆ ಫೋನ್ ಕಂಪನಿಗಳು ತಮ್ಮ ಸೆಟ್​ಗಳಲ್ಲಿ ಆಳವಡಿಸುವ ಕೆಮೆರಾಗಳ ಗುಣಮಟ್ಟವನ್ನು ಲಾಂಚ್ ಮಾಡುವ ಪ್ರತಿ ಹೊಸ ಮಾಡೆಲ್​ನೊಂದಿಗೆ ಹೆಚ್ಚಿಸುತ್ತಾ ಸಾಗಿವೆ. 2 ಮೆಗಾ ಪಿಕ್ಸೆಲ್ ನಿಂದ ಶುರುವಾಗಿದ್ದ ಕೆಮೆರಾಗಳ ಸಾಮರ್ಥ್ಯ ಈಗ 48 ಮಗಾ ಪಿಕ್ಸೆಲ್ ಗೆ ಬಂದಿದೆ. ನಮಗೆ ಲಭ್ಯವಾಗಿರುವ ಮಾಹಿತಿಯೊಂದರ ಪ್ರಕಾರ ಸ್ಯಾಮ್ಸಂಗ್ 200 ಮೆಗಾ ಪಿಕ್ಸೆಲ್ ಇರುವ ಫೋನ್ ತಯಾರಿಸುತ್ತಿದೆಯಂತೆ!

ಫೋನ್​​ನಲ್ಲಿ ಅಳವಡಿಸಿದ ಕೆಮೆರಾ ಮತ್ತು ಅದರ ಸಾಮರ್ಥ್ಯ ಹೆಚ್ಚಿದಂತೆ ಅದರ ಬೆಲೆಯೂ ಜಾಸ್ತಿಯಾಗುತ್ತದೆ. ಆದರೆ 48 ಮೆಗಾ ಪಿಕ್ಸೆಲ್ ಕೆಮೆರಾ ಹೊಂದಿರುವ ಬ್ರ್ಯಾಂಡೆಡ್ ಫೋನ್​ಗಳು ರೂ. 20,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಸ್ಯಾಮ್ಸಂಗ್ ಗೆಲಾಕ್ಸಿ 2021 48 ಮೆಗಾಪಿಕ್ಸೆಲ್ ಮೇನ್ ಕೆಮೆರಾ ಇರುವ ಫೋನು ರೂ. 12,499 ಗಳಿಗೆ ಮಾರಾಟವಾಗುತ್ತಿದೆ.

ರೀಯಲ್ಮಿ ನೋಟ್ 10 ಫೋನ್ 48 ಮೆಗಾ ಪಿಕ್ಸೆಲ್ ಕೆಮೆರಾದೊಂದಿಗೆ ಲಭ್ಯವಿದ್ದು ಇದರ ಬೆಲೆ ರೂ. 13,499 ಆಗಿದೆ. 5ಜಿಯನ್ನು ಸಪೋರ್ಟ್ ಮಾಡುವ ಮತ್ತು 48 ಎಮ್ ಪಿ ಕೆಮೆರಾ ಹೊಂದಿರುವ ರೀಯಲ್ಮಿ 8 ಫೋನ್ ನಿಮಗೆ 15,499 ರೂ. ಗಳಿಗೆ ಸಿಗಲಿದೆ. ಹಾಗೆಯೇ, ಇಷ್ಟೇ ಸಾಮರ್ಥ್ಯದ ಕೆಮೆರಾ ಹೊಂದಿರುವ ಪೋಕೋ ಎಕ್ಸ್ 3 ಪ್ರೋ ಹಾಗೂ ರೀಯಲ್ಮಿ ನಾರ್ಜೊ 30 ಪ್ರೋ ಫೋನ್​ಗಳು ಕ್ರಮವಾಗಿ ರೂ. 16,499 ಮತ್ತು ರೂ. 16,999 ಗಳಿಗೆ ಮಾರಾಟವಾಗುತ್ತಿವೆ.

ಇದನ್ನೂ ಓದಿ:  Sakath: ಮೋಡಿ ಮಾಡುವಂತಿದೆ ಗಣೇಶ್- ನಿಶ್ವಿಕಾ ಅಭಿನಯದ ‘ಸಖತ್’ ಚಿತ್ರದ ಹಾಡು; ವಿಡಿಯೋ ಸಾಂಗ್ ಇಲ್ಲಿದೆ