‘ಇಬ್ಬರು ಹೆಂಡತಿಯರು ನನ್ನ ಪಾಲಿನ ಶಕ್ತಿ’; ಸಂಸಾರದ ಬಗ್ಗೆ ರಾಜು ತಾಳಿಕೋಟೆ ಮುಕ್ತ ಮಾತು
ಇಬ್ಬರು ಪತ್ನಿಯರನ್ನು ತಮ್ಮ ಪಾಲಿನ ಶಕ್ತಿ ಎಂದು ಕರೆದಿದ್ದಾರೆ ರಾಜು ತಾಳಿಕೋಟೆ. ತಮ್ಮ ಮದುವೆ ಮತ್ತು ಸಂಸಾರದ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ರಂಗಭೂಮಿಯಲ್ಲಿ ದೊಡ್ಡ ಯಶಸ್ಸು ಕಂಡವರು ನಟ ರಾಜು ತಾಳಿಕೋಟೆ. ನಂತರ ಚಿತ್ರರಂಗಕ್ಕೂ ಅವರು ಕಾಲಿಟ್ಟು ಇನ್ನಷ್ಟು ಜನಪ್ರಿಯತೆ ಪಡೆದರು. ಈ ಹಾಸ್ಯ ಕಲಾವಿದನಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಬಹುತೇಕರಿಗೆ ಗೊತ್ತಿಲ್ಲದ ವಿಷಯ ಏನೆಂದರೆ, ರಾಜು ತಾಳಿಕೋಟೆ ಅವರಿಗೆ ಇಬ್ಬರು ಪತ್ನಿಯರು. ಇಬ್ಬರ ಜೊತೆಗೂ ಅವರು ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದಾರೆ. ಆ ಇಬ್ಬರು ಪತ್ನಿಯರನ್ನು ತಮ್ಮ ಪಾಲಿನ ಶಕ್ತಿ ಎಂದು ಕರೆದಿದ್ದಾರೆ ರಾಜು ತಾಳಿಕೋಟೆ. ತಮ್ಮ ಮದುವೆ ಮತ್ತು ಸಂಸಾರದ ಬಗ್ಗೆ ಅವರು ಮನಸಾರೆ ಮಾತನಾಡಿದ್ದಾರೆ.
‘ಇಬ್ಬರನ್ನೂ ನಾನು ಇಷ್ಟಪಟ್ಟು ಮದುವೆ ಆದೆ. ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕಂಡಿದ್ದೇನೆ. ಈಗಲೂ ನಾವು ಜೊತೆಯಾಗಿಯೇ ಇದ್ದೇವೆ. ಹೆಂಡತಿಯರು ಬರೀ ವ್ಯಕ್ತಿಗಳಾಗಿ ಮಾತ್ರವಲ್ಲ, ನನ್ನ ಪಾಲಿನ ಶಕ್ತಿಗಳಾಗಿ ಇದ್ದಾರೆ. ನಾನು ರಂಗಭೂಮಿಗೆ ಮುಡಿಪಾಗಿದ್ದೆ. ಅವರಿಬ್ಬರು ನನ್ನೆಲ್ಲ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತುಕೊಂಡರು’ ಎಂದು ರಾಜು ತಾಳಿಕೋಟೆ ಹೇಳಿದ್ದಾರೆ.
ಇದನ್ನೂ ಓದಿ:
ವಿಜಯಪುರ: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ
ವಿಜಯಪುರ: ‘ನನಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ’; ನಟ ರಾಜು ತಾಳಿಕೋಟೆ ಪ್ರತ್ಯಾರೋಪ