ರಾಯಚೂರಿನಲ್ಲಿ ಮಳೆಯಿಂದ ಮರಿಯನ್ನು ರಕ್ಷಿಸಲು ತಾಯಿ ನಾಯಿ ಏನು ಮಾಡಿತು ನೋಡಿ
ತಾಯಿ ನಾಯಿ ಮರಿಯನ್ನ ಬಾಯಿಯಲ್ಲಿ ಹಿಡಿದು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದೆ. ನೀರಿಲ್ಲದೆ ಕಡೆ ಮರಿಯನ್ನ ಬಾಯಿಯಲ್ಲಿ ಹಿಡಿದುಕೊಂಡು ತಾಯಿ ನಾಯಿ ಓಡಿದೆ.
ರಾಯಚೂರು: ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ನಗರದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚರಂಡಿ ನೀರು ಮನೆಗಳಿಗೆ ನುಗ್ಗಿ ಜನರು ಪರದಾಡುತ್ತಿದ್ದಾರೆ. ಅಧಿಕಾರಿಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ತಾಯಿ ನಾಯಿಯೊಂದು ತನ್ನ ಮರಿಯನ್ನು ರಕ್ಷಿಸಲು ಪರದಾಡಿದೆ. ನಾಯಿ ತನ್ನ ಮರಿಯನ್ನು ರಕ್ಷಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ತಡ ರಾತ್ರಿ ರಾಯಚೂರು ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿದೆ. ಸಿಯಾತಲಾಬ್ ಬಡಾವಣೆಗೆ ನೀರು ನುಗ್ಗಿದೆ. ನೀರು ನುಗ್ಗಿದ ಹಿನ್ನೆಲೆ ತಾಯಿ ನಾಯಿಯೊಂದು ತನ್ನ ಮರಿಯನ್ನ ರಕ್ಷಿಸಲು ಪರದಾಡಿದೆ. ತಾಯಿ ನಾಯಿ ಮರಿಯನ್ನ ಬಾಯಿಯಲ್ಲಿ ಹಿಡಿದು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿದೆ. ನೀರಿಲ್ಲದೆ ಕಡೆ ಮರಿಯನ್ನ ಬಾಯಿಯಲ್ಲಿ ಹಿಡಿದುಕೊಂಡು ತಾಯಿ ನಾಯಿ ಓಡಿದೆ. ತನ್ನ ಮರಿಯನ್ನು ರಕ್ಷಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.