Sakath: ಮೋಡಿ ಮಾಡುವಂತಿದೆ ಗಣೇಶ್- ನಿಶ್ವಿಕಾ ಅಭಿನಯದ ‘ಸಖತ್’ ಚಿತ್ರದ ಹಾಡು; ವಿಡಿಯೋ ಸಾಂಗ್ ಇಲ್ಲಿದೆ

Ganesh and Nishvika: ನಟ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿಶ್ವಿಕಾ ಅಭಿನಯದ ‘ಸಖತ್’ ಚಿತ್ರದ ‘ಪ್ರೇಮಕ್ಕೆ ಕಣ್ಣಿಲ್ಲ’ ಹಾಡು ಬಿಡುಗಡೆಯಾಗಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಹಾಗೂ ಜ್ಯೂಡಾ ಸ್ಯಾಂಡಿ ಸಂಗೀತವಿರುವ ಈ ಹಾಡು ಗುನುಗಿಕೊಳ್ಳುವಂತಿದ್ದು, ಅಭಿಮಾನಿಗಳಿಗೆ ಪ್ರಿಯವಾಗಿದೆ.

Sakath: ಮೋಡಿ ಮಾಡುವಂತಿದೆ ಗಣೇಶ್- ನಿಶ್ವಿಕಾ ಅಭಿನಯದ ‘ಸಖತ್’ ಚಿತ್ರದ ಹಾಡು; ವಿಡಿಯೋ ಸಾಂಗ್ ಇಲ್ಲಿದೆ
ಹಾಡಿನಲ್ಲಿ ಗಣೇಶ್ ಹಾಗೂ ನಿಶ್ವಿಕಾ
Follow us
TV9 Web
| Updated By: shivaprasad.hs

Updated on:Oct 09, 2021 | 4:02 PM

ಸ್ಯಾಂಡಲ್​ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ 2019ರಲ್ಲಿ ತೆರೆಕಂಡ ‘ಗೀತಾ’ ಚಿತ್ರದ ನಂತರ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಈ ಅವಧಿಯಲ್ಲಿ ಅವರು ‘ಸಖತ್’, ‘ಗಾಳಿಪಟ 2’ ಸೇರಿದಂತೆ ಹಲವು ಚಿತ್ರಗಳ ಕೆಲಸಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದಾರೆ. ಆ ಚಿತ್ರಗಳ ಅಪ್ಡೇಟ್ ಕುರಿತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇದೀಗ ಗಣೇಶ್ ‘ಸಖತ್’ನ ಮಾಧುರ್ಯಭರಿತವಾದ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕಮ್​ಬ್ಯಾಕ್ ಮಾಡಿದ್ದು, ತಮ್ಮ ನೂತನ ಚಿತ್ರದ ಕುರಿತು ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ. ಕನ್ನಡದ ಹಿಟ್ ನಿರ್ದೇಶಕರಲ್ಲಿ ಒಬ್ಬರಾದ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿರುವ ‘ಸಖತ್’ ಚಿತ್ರದ ‘ಪ್ರೇಮಕೆ ಕಣ್ಣಿಲ್ಲ’ ಹಾಡು ಬಿಡುಗಡೆಯಾಗಿದ್ದು, ತನ್ನ ಮೆಲೋಡಿಯಿಂದ ವಿಂಟೇಜ್ ಗಣೇಶ್ ಅವರನ್ನು ಅಭಿಮಾನಿಗಳಿಗೆ ನೆನಪಿಸಿದೆ.

‘ಮುಂಗಾರು ಮಳೆ’, ‘ಗಾಳಿಪಟ’ ಚಿತ್ರಗಳಲ್ಲಿ ಖ್ಯಾತ ಗೀತ ರಚನೆಕಾರ ಜಯಂತ್ ಕಾಯ್ಕಿಣಿ ಹಲವು ಹಾಡುಗಳಿಗೆ ಸಾಹಿತ್ಯ ರಚಿಸಿದ್ದರು. ಅವುಗಳಿಗೆ ತೆರೆಯ ಮೇಲೆ ಗಣೇಶ್ ಜೀವ ತುಂಬಿದ್ದರು. ನಂತರ ಹಲವು ಚಿತ್ರಗಳಲ್ಲಿ ಈ ಕಾಂಬಿನೇಷನ್ ಮೋಡಿ ಮಾಡಿತ್ತು. ಇದೀಗ ‘ಸಖತ್’ ಚಿತ್ರದ ‘ಪ್ರೇಮಕೆ ಕಣ್ಣಿಲ್ಲ’ ಹಾಡಿನ ಮೂಲಕ ಮತ್ತೊಂದು ಭರ್ಜರಿ ಹಿಟ್​ನ ಸೂಚನೆಯನ್ನು ಈ ಜೋಡಿ ನೀಡಿದೆ. ಈ ಹಾಡಿಗೆ ಸಂಗೀತ ನೀಡಿರುವವರು ಜ್ಯೂಡಾ ಸ್ಯಾಂಡಿ. ಪಂಚಮ್ ಜೀವಾ ಹಾಗೂ ಶ್ರೇಯಾ ಅಯ್ಯರ್ ಹಾಡಿಗೆ ದನಿಯಾಗಿದ್ದಾರೆ. ಹಾಡಿನಲ್ಲಿ ಗಣೇಶ್ ಅವರೊಂದಿಗೆ ನಟಿ ನಿಶ್ವಿಕಾ ನಾಯ್ಡು ತೆರೆಹಂಚಿಕೊಂಡಿದ್ದಾರೆ.

Ganersh and Nishvika in Sakath

ಹಾಡಿನಲ್ಲಿ ಗಣೇಶ್ ಹಾಗೂ ನಿಶ್ವಿಕಾ ನಾಯ್ಡು

ನಿರ್ದೇಶ ಸಿಂಪಲ್ ಸುನಿ 2019ರಲ್ಲಿ ತೆರೆಕಂಡ ‘ಬಜಾರ್’ ಚಿತ್ರದ ನಂತರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಅವರ ನಿರ್ದೇಶನದಲ್ಲಿ ಹಲವು ಚಿತ್ರಗಳು ಅನೌನ್ಸ್ ಆಗಿದ್ದು, ಚಿತ್ರೀಕರಣ ನಡೆಯುತ್ತಿದೆ. ‘ಸಖತ್’ ಚಿತ್ರದ ಹಾಡಿನ ಮೂಲಕ ಅವರೂ ಮರಳಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ. ಪ್ರಸ್ತುತ ಬಿಡುಗಡೆಯಾಗಿರುವ ಹಾಡಿನಲ್ಲಿ ಗಣೇಶ್ ಹಾಗೂ ನಿಶ್ವಿಕಾ ನಾಯ್ಡು ನಟಿಸಿದ್ದು, ಇದಕ್ಕೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಸಖತ್ ಸಾಥ್ ನೀಡಿದೆ. ‘ಒಂಚೂರು ಸ್ಪರ್ಶ, ಒಂಚೂರು ಊಹೆ, ಒಂಚೂರು ಗಂಧ, ಒಂಚೂರು ಮಾಯೆ…’ ಈ ಸಾಲುಗಳಿರುವ ಈ ಹಾಡು ಗುನುಗಿಕೊಳ್ಳುವಂತಿದೆ. ‘ಪ್ರೇಮಕೆ ಕಣ್ಣಿಲ್ಲ’ ಹಾಡು ಇಲ್ಲಿದೆ:

‘ಸಖತ್’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ನಿಶಾ ವೆಂಕಟ್ ಕೋಣಂಕಿ ಮತ್ತು ಸುಪ್ರಿತ್ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಈ ಹಾಡಿನ ಮೂಲಕ ಚಿತ್ರದ ಕುರಿತಾದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಚಿತ್ರದ ಕುರಿತ ಮತ್ತಷ್ಟು ಅಪ್ಡೇಟ್​ಗಳಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್​ನಲ್ಲಿ ಈಗಾಗಲೇ ‘ಸ್ಟೋರಿ ಆಫ್ ರಾಯಗಡ’ ಚಿತ್ರ ಅನೌನ್ಸ್ ಆಗಿದ್ದು, ಚಿತ್ರದ ಪೋಸ್ಟರ್​ಗಳು ಸಾಕಷ್ಟು ಕುತೂಹಲ ಹುಟ್ಟುಹಾಕಿತ್ತು.

ಗಣೇಶ್ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಕ್ಕೂ ಅಭಿಮಾನಿಗಳು ದೀರ್ಘಕಾಲದಿಂದ ಕಾದು ಕುಳಿತಿದ್ದಾರೆ. ಇದಲ್ಲದೇ ಅವರ ಬತ್ತಳಿಕೆಯಲ್ಲಿ ‘ತ್ರಿಬಲ್ ರೈಡಿಂಗ್’ ಚಿತ್ರವಿದೆ. ಇತ್ತ ಸುನಿ, ‘ಅವತಾರ ಪುರುಷ’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಿದ್ದಾರೆ. ಇದರೊಂದಿಗೆ ‘ರಾಬಿನ್​ಹುಡ್’ ಚಿತ್ರವೂ ಅವರ ಬತ್ತಳಿಕೆಯಲ್ಲಿದೆ.

ಇದನ್ನೂ ಓದಿ:

‘ಸಲಗ’ ಚಿತ್ರಕ್ಕೆ ಶುಭ ಹಾರೈಸಿದ ಅಭಿಷೇಕ್ ಅಂಬರೀಶ್; ಪ್ರೀ-ರಿಲೀಸ್ ಈವೆಂಟ್​ನಲ್ಲಿ ಭಾಗವಹಿಸಲಿದ್ದಾರೆ ಈ ಖ್ಯಾತ ತಾರೆಯರು

‘ಇಬ್ಬರು ಹೆಂಡತಿಯರು ನನ್ನ ಪಾಲಿನ ಶಕ್ತಿ’; ಸಂಸಾರದ ಬಗ್ಗೆ ರಾಜು ತಾಳಿಕೋಟೆ ಮುಕ್ತ ಮಾತು

Published On - 3:58 pm, Sat, 9 October 21

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ