‘ಸಲಗ’ ಚಿತ್ರಕ್ಕೆ ಶುಭ ಹಾರೈಸಿದ ಅಭಿಷೇಕ್ ಅಂಬರೀಶ್; ಪ್ರೀ-ರಿಲೀಸ್ ಈವೆಂಟ್ನಲ್ಲಿ ಭಾಗವಹಿಸಲಿದ್ದಾರೆ ಈ ಖ್ಯಾತ ತಾರೆಯರು
Salaga: ಚಂದನವನದಲ್ಲಿ ಈಗಾಗಲೇ ‘ಸಲಗ’ ಚಿತ್ರದ ಸದ್ದು ಜೋರಾಗಿದೆ. ಇದೀಗ ಅಭಿಷೇಕ್ ಅಂಬರೀಶ್ ಸಲಗ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಅಕ್ಟೋಬರ್ 10ರಂದು ನಡೆಯಲಿರುವ ಪ್ರೀ- ರಿಲೀಸ್ ಈವೆಂಟ್ನಲ್ಲಿ ಖ್ಯಾತ ನಾಯಕರು, ರಾಜಕಾರಣಿಗಳು ಭಾಗವಹಿಸಲಿದ್ದಾರೆ.
ಅಕ್ಟೋಬರ್ 14ರಂದು ದುನಿಯಾ ವಿಜಯ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘ಸಲಗ’ ಚಿತ್ರ ಬಿಡುಗಡೆಯಾಗುತ್ತಿದೆ. ಇದಕ್ಕೆ ಚಿತ್ರರಂಗದಿಂದ ಖ್ಯಾತ ತಾರೆಯರೂ ಸೇರಿದಂತೆ ಅನೇಕರು ಶುಭಕೋರುತ್ತಿದ್ದಾರೆ. ನಟ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಕೂಡ ವಿಶೇಷ ಸಂದೇಶದ ಮುಖಾಂತರ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಸಂದೇಶದಲ್ಲಿ ಅವರು ತಮ್ಮ ತಂದೆ ಅಂಬರೀಶ್ ಅವರ ‘ಒಂಟಿ ಸಲಗ’ ಚಿತ್ರದ ನೆನಪನ್ನು ಮಾಡಿಕೊಂಡಿದ್ದಾರೆ. ‘‘ಅಂದು ‘ಒಂಟಿ ಸಲಗ’, ಇಂದು ‘ಸಲಗ’. ಇದೇ ಅಕ್ಟೋಬರ್ 14ರಂದು ಸಲಗ ಬಿಡುಗಡೆಯಾಗುತ್ತದೆ. ದುನಿಯಾ ವಿಜಯ್, ಡಾಲಿ ಧನಂಜಯ್, ನಿರ್ಮಾಪಕ ಶ್ರೀಕಾಂತ್ ಅವರಿಗೆ ಶುಭಹಾರೈಕೆಗಳು. ಎಲ್ಲಾ ಸಿನಿ ಪ್ರೇಮಿಗಳು ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ’’ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
ಅಭಿಷೇಕ್ ಅಂಬರೀಶ್ ಶುಭ ಕೋರಿರುವ ವಿಡಿಯೊ ಇಲ್ಲಿದೆ:
ಸಲಗ ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ಇಟ್ಟು ಅಣ್ಣಮ್ಮ ದೇವಿಗೆ ಪೂಜೆ ಸಲ್ಲಿಸಿದ ಸಲಗ ಚಿತ್ರತಂಡ: ಲಗ ಚಿತ್ರತಂಡವು ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ಇಟ್ಟು ಅಣ್ಣಮ್ಮ ದೇವಿಗೆ ಪೂಜೆ ಸಲ್ಲಿಸಿದೆ. ನಿರ್ದೇಶಕ, ನಟ ದುನಿಯಾ ವಿಜಯ್, ಪತ್ನಿ ಕೀರ್ತಿ, ಪುತ್ರ ಸಾಮ್ರಾಟ್ ಜೊತೆ ಪೂಜೆ ಸಲ್ಲಿಸಿದ್ದಾರೆ. ಚಿತ್ರದ ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು. ಇದೇ ಅಕ್ಟೋಬರ್ 14ರಂದು ಸಲಗ ಚಿತ್ರವು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.
ಅದ್ದೂರಿ ಪ್ರಿ-ರಿಲೀಸ್ ಈವೆಂಟ್ನಲ್ಲಿ ಖ್ಯಾತ ತಾರೆಯರು ಭಾಗಿ: ‘ಸಲಗ’ ಚಿತ್ರದ ಪ್ರಿ-ರಿಲೀಸ್ ಅಕ್ಟೋಬರ್ 10ರ ಭಾನುವಾರ ಅದ್ದೂರಿಯಾಗಿ ನಡೆಯಲಿದೆ. ಈವೆಂಟ್ಗೆ ನಟರಾದ ಪುನೀತ್ ರಾಜಕುಮಾರ್, ಶಿವರಾಜ್ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮೊದಲಾದವರು ಭಾಗವಹಿಸಲಿದ್ದಾರೆ. ಇದರೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕೂಡ ಉಪಸ್ಥಿತರಿರಲಿದ್ದಾರೆ ಎಂದು ನಿರ್ಮಾಪಕ ಕೆಪಿ ಶ್ರೀಕಾಂತ್ ಮಾಹಿತಿ ಹಂಚಿಕೊಂಡಿದ್ದಾರೆ.
Hi all small update on pre release event# Thnks 2 evryone who r coming nd supporting our Salaga movie whole heartedly # in d interest f kannada film industry in dis tough situation #I welcome all #i believe in we # pic.twitter.com/s9DqVKaSsp
— Sreekanth KP (@kp_sreekanth) October 8, 2021
‘ಸಲಗ’ ಚಿತ್ರವು ದುನಿಯಾ ವಿಜಯ್ ಆಕ್ಷನ್ ಕಟ್ ಹೇಳಿರುವ ಮೊದಲ ಚಿತ್ರವಾಗಿದೆ. ಈಗಾಗಲೇ ಚಿತ್ರದ ಹಾಡುಗಳು, ಪೋಸ್ಟರ್ ಸಿನಿ ಪ್ರಿಯರ ಮನಗೆದ್ದಿದೆ. ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದ್ದು, ರಾಜ್ಯಾದ್ಯಂತ ಸುಮಾರು ಅಕ್ಟೋಬರ್ 14ರಂದು ಬಿಡುಗಡೆಯಾಗಲಿದೆ. ಅದೇ ದಿನ ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಕೂಡ ಬಿಡುಗಡೆಯಾಗಲಿದೆ.
ಇದನ್ನೂ ಓದಿ:
ನನಗೆ ಸುಪ್ರಿತಾ ಜತೆ ಮದುವೆ ಫಿಕ್ಸ್ ಆಗಿದೆ ಎಂದ ಬಿಗ್ ಬಾಸ್ ಶೈನ್ ಶೆಟ್ಟಿ
‘ಸಲಗ’ಕ್ಕೆ ಬಲ ನೀಡಲಿರುವ ಪುನೀತ್ ರಾಜ್ಕುಮಾರ್; ಪ್ರೀ-ರಿಲೀಸ್ ಇವೆಂಟ್ಗೆ ಅಪ್ಪು ಅತಿಥಿ
ದುನಿಯಾ ವಿಜಯ್ ‘ಸಲಗ’ಕ್ಕೆ ಸಿದ್ದರಾಮಯ್ಯ ಬೆಂಬಲ; ತಂಡಕ್ಕೆ ಒಳ್ಳೆಯದಾಗಲಿ ಎಂದ ಮಾಜಿ ಸಿಎಂ