ಈ ಬಗ್ಗೆ ಸತ್ಯಜಿತ್ ಅವರ ಪುತ್ರ ಆಕಾಶ್ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ‘ಸ್ಟ್ರೋಕ್ ಆಗಿರೋ ಕಾರಣ ಐಸಿಯುನಲ್ಲಿ ಅಡ್ಮಿಟ್ ಮಾಡಿದ್ದೇವೆ. ಆರೋಗ್ಯದ ಸ್ಥಿತಿ ತುಂಬಾ ಗಂಭೀರವಾಗಿದೆ. ಹಾರ್ಟ್ ಸ್ಟ್ರೋಕ್ ಆಗಿದೆ. ಹಾರ್ಟ್ ರೇಟ್ ತುಂಬಾ ಕಡಿಮೆ ಆಗಿದೆ. ಬಿಪಿ ಫುಲ್ ಲೋ ಆಗಿದೆ. ಮಾನಸಿಕವಾಗಿ ತುಂಬಾ ನೊಂದಿದ್ದಾರೆ’ ಎಂದು ಆಕಾಶ್ ಹೇಳಿದ್ದಾರೆ.
‘ಮಗಳ ವಿಷಯದಲ್ಲಿ ತುಂಬಾ ನೋವು ಪಟ್ಟಿದ್ದರು. ಇಂತಹ ಟೈಂನಲ್ಲೂ ಮಗಳು ಬಂದಿಲ್ಲ. ಸದ್ಯ ಅಪ್ಪ ಏನೂ ಮಾತಾಡ್ತಿಲ್ಲ. ಡಯಾಲಿಸಿಸ್ ಮಾಡಲೂ ಆಗುತ್ತಿಲ್ಲ. ಯಾವುದೇ ಚಿಕಿತ್ಸೆ ಪ್ರಯೋಜನ ಆಗ್ತಿಲ್ಲ ಅಂತ ಡಾಕ್ಟರ್ ಸಹ ಹೇಳಿದ್ದಾರೆ. ಆರೋಗ್ಯ ಕ್ಷಣ ಕ್ಷಣಕ್ಕೂ ಚಿಂತಾಜನಕವಾಗುತ್ತಿದೆ’ ಎಂದು ಸತ್ಯಜಿತ್ ಪುತ್ರ ಆಕಾಶ್ ಮಾಹಿತಿ ನೀಡಿದ್ದಾರೆ.
ಸತ್ಯಜಿತ್ ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಗ್ಯಾಂಗ್ರಿನ್ನಿಂದಾಗಿ ಅವರ ಒಂದು ಕಾಲು ಕತ್ತರಿಸಲಾಗಿತ್ತು. ಈಗ ಸಕ್ಕರೆ ಕಾಯಿಲೆ ಮತ್ತು ಇನ್ನಿತರೆ ವಯೋಸಹಜ ಅನಾರೋಗ್ಯದ ಕಾರಣ ಸತ್ಯಜಿತ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿದೆ. ಹಲವು ದಿನಗಳಿಂದ ಸತ್ಯಜಿತ್ಗೆ ಆರೋಗ್ಯ ಕೈಕೊಟ್ಟಿದ್ದರಿಂದ ಅವರಿಗೆ ಆರ್ಥಿಕ ಸಂಕಷ್ಟ ಕೂಡ ಎದುರಾಗಿದೆ. ಒಂದು ಕಾಲದಲ್ಲಿ ಅವರು ಬಹು ಬೇಡಿಕೆಯ ಫೋಷಕ ನಟನಾಗಿದ್ದರು. ನೂರಾರು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ಇದನ್ನೂ ಓದಿ:
ನಟನಾಗಿರುವುದಕ್ಕೆ ತಂದೆ ಉತ್ತಮವಾಗಿ ಅಳುತ್ತಿದ್ದಾರೆ: ಸತ್ಯಜಿತ್ ಕಣ್ಣೀರನ್ನು ಟೀಕಿಸಿದ ಮಗಳು ಸ್ವಲೇಹಾ
ಮಗಳಿಗಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ; ಮಾಧ್ಯಮದ ಮುಂದೆ ಕಣ್ಣೀರಿಟ್ಟ ನಟ ಸತ್ಯಜಿತ್