ದುನಿಯಾ ವಿಜಯ್ ‘ಸಲಗ’ಕ್ಕೆ ಸಿದ್ದರಾಮಯ್ಯ ಬೆಂಬಲ; ತಂಡಕ್ಕೆ ಒಳ್ಳೆಯದಾಗಲಿ ಎಂದ ಮಾಜಿ ಸಿಎಂ
ಕೊವಿಡ್ ಪ್ರಕರಣ ಕಡಿಮೆ ಆದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳನ್ನು ತೆರೆಯಲಾಗಿದೆ. ಅಲ್ಲದೆ, ಶೇ.100 ಆಸನ ವ್ಯವಸ್ಥೆಗೆ ಸರ್ಕಾರ ಅವಕಾಶ ನೀಡದೆ. ಹೀಗಾಗಿ, ಸ್ಟಾರ್ ಸಿನಿಮಾಗಳು ರಿಲೀಸ್ ಡೇಟ್ ಘೋಷಣೆ ಮಾಡುತ್ತಿವೆ.
ಅಕ್ಟೋಬರ್ 14ರಂದು ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ‘ಸಲಗ’ ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡಲಾಗುತ್ತಿದೆ. ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಸಿನಿಮಾಗೆ ವಿಜಯ್ ಚಿತ್ರ ಸ್ಪರ್ಧೆ ನೀಡುತ್ತಿದೆ. ಇಂದು ‘ಸಲಗ’ ತಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಸಿದ್ದರಾಮಯ್ಯ ಅವರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.
‘ಅಕ್ಟೋಬರ್ 14ರಂದು ತೆರೆ ಕಾಣಲಿರುವ ಸಲಗ ಚಿತ್ರದ ತಂಡದವರು ನಾಯಕ ನಟ ದುನಿಯಾ ವಿಜಯ್ ಅವರ ನೇತೃತ್ವದಲ್ಲಿ ಇಂದು ನನ್ನನ್ನು ಭೇಟಿ ಮಾಡಿದರು. ಶಾಸಕರಾದ ಬೈರತಿ ಸುರೇಶ್ ಅವರು ಈ ವೇಳೆ ಹಾಜರಿದ್ದರು. ದುನಿಯಾ ವಿಜಯ್ ಒಬ್ಬ ಪ್ರತಿಭಾನ್ವಿತ ನಟ, ಹೆಚ್ಚಿನ ಶ್ರಮವಹಿಸಿ ಸಿನೆಮಾ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ ಸಿದ್ದರಾಮಯ್ಯ.
ದೇಶಾದ್ಯಂತ ಕಾಣಿಸಿಕೊಂಡಿದ್ದ ಕೊರೊನಾ ಎರಡನೇ ಅಲೆ ಸಾಕಷ್ಟು ತೊಂದರೆ ತಂದಿತ್ತು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಜಾರಿಗೆ ತಂದಿದ್ದ ಲಾಕ್ಡೌನ್ನಿಂದ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದವು. ಕೊವಿಡ್ ಪ್ರಕರಣ ಕಡಿಮೆ ಆದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳನ್ನು ತೆರೆಯಲಾಗಿದೆ. ಅಲ್ಲದೆ, ಶೇ.100 ಆಸನ ವ್ಯವಸ್ಥೆಗೆ ಸರ್ಕಾರ ಅವಕಾಶ ನೀಡದೆ. ಹೀಗಾಗಿ, ಸ್ಟಾರ್ ಸಿನಿಮಾಗಳು ರಿಲೀಸ್ ಡೇಟ್ ಘೋಷಣೆ ಮಾಡುತ್ತಿವೆ.
ಅಕ್ಟೋಬರ್ 14ರಂದು ತೆರೆ ಕಾಣಲಿರುವ ಸಲಗ ಚಿತ್ರದ ತಂಡದವರು ನಾಯಕ ನಟ ದುನಿಯಾ ವಿಜಯ್ ಅವರ ನೇತೃತ್ವದಲ್ಲಿ ಇಂದು ನನ್ನನ್ನು ಭೇಟಿ ಮಾಡಿದರು. ಶಾಸಕರಾದ ಬೈರತಿ ಸುರೇಶ್ ಅವರು ಈ ವೇಳೆ ಹಾಜರಿದ್ದರು. ದುನಿಯಾ ವಿಜಯ್ ಒಬ್ಬ ಪ್ರತಿಭಾನ್ವಿತ ನಟ, ಹೆಚ್ಚಿನ ಶ್ರಮವಹಿಸಿ ಸಿನೆಮಾ ಮಾಡಿದ್ದಾರೆ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. pic.twitter.com/EtkuRJ84Qv
— Siddaramaiah (@siddaramaiah) October 4, 2021
‘ಸಲಗ’ ಸಿನಿಮಾ ಸ್ಯಾಂಡಲ್ವುಡ್ನ ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇಷ್ಟು ದಿನ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರ ಏಪ್ರಿಲ್ 15ಕ್ಕೆ ಎಂಟ್ರಿ ಕೊಡಬೇಕಿತ್ತು. ಆದರೆ, ಕೊವಿಡ್ನಿಂದ ಅದು ಸಾಧ್ಯವಾಗಿಲ್ಲ. ಹೀಗಾಗಿ, ಆಗಸ್ಟ್ 20 ‘ಸಲಗ’ ರಿಲೀಸ್ ಮಾಡುತ್ತೇವೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಆಗಲೂ ಸಿನಿಮಾ ರಿಲೀಸ್ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಒಂದೇ ದಿನ ‘ಸಲಗ’ ಮತ್ತು ‘ಕೋಟಿಗೊಬ್ಬ 3’; ಖಚಿತಪಡಿಸಿದ ನಿರ್ಮಾಪಕ