ನನಗೆ ಸುಕೃತಾ ಜತೆ ಮದುವೆ ಫಿಕ್ಸ್ ಆಗಿದೆ ಎಂದ ಬಿಗ್ ಬಾಸ್ ಶೈನ್ ಶೆಟ್ಟಿ
ಕಲರ್ಸ್ ಕನ್ನಡ ವಾಹಿನಿ ಅನುಬಂಧ ಅವಾರ್ಡ್ಸ್ ಮೂಲಕ ಪ್ರೇಕ್ಷಕರ ಎದುರು ಬರುತ್ತಿದೆ. ಕಲರ್ಸ್ನಲ್ಲಿ ಪ್ರಸಾರವಾದ ಮತ್ತು ಪ್ರಸಾರವಾಗುತ್ತಿರುವ ಧಾರಾವಾಹಿ ಕಲಾವಿದರು ಹಾಗೂ ರಿಯಾಲಿಟಿ ಶೋಗಳ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಶೈನ್ ಶೆಟ್ಟಿ ಹೆಸರು ಕೇಳಿದ್ರೆ ಸಾಕಷ್ಟು ಹುಡುಗಿಯರಿಗೆ ಖುಷಿ ಆಗುತ್ತದೆ. ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದು, ವಿನ್ನರ್ ಆಗಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡರು. ತಮ್ಮ ಮಾತಿನ ಮೂಲಕ, ಸ್ಟೈಲ್ ಮೂಲಕ ಸಾಕಷ್ಟು ಹುಡುಗಿಯರ ಹೃದಯ ಕದ್ದಿದ್ದಾರೆ ಅವರು. ಈಗ ಅವರು ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ತಮಗೆ ಸುಕೃತಾ ಎಂಬುವವರ ಜತೆ ಮದುವೆ ಫಿಕ್ಸ್ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಂತ ಇದು ತೆರೆಯ ಹಿಂದಿನ ವಿಚಾರ ಅಲ್ಲವೇ ಅಲ್ಲ.
ಕಲರ್ಸ್ ಕನ್ನಡ ವಾಹಿನಿ ಅನುಬಂಧ ಅವಾರ್ಡ್ಸ್ ಮೂಲಕ ಪ್ರೇಕ್ಷಕರ ಎದುರು ಬರುತ್ತಿದೆ. ಕಲರ್ಸ್ನಲ್ಲಿ ಪ್ರಸಾರವಾದ ಮತ್ತು ಪ್ರಸಾರವಾಗುತ್ತಿರುವ ಧಾರಾವಾಹಿ ಕಲಾವಿದರು ಹಾಗೂ ರಿಯಾಲಿಟಿ ಶೋಗಳ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಭರಪೂರ ಮನರಂಜನೆ ಈ ಕಾರ್ಯಕ್ರಮದಲ್ಲಿ ಇರಲಿದೆ. ಪ್ರತಿ ವರ್ಷವೂ ಈ ಕಾರ್ಯಕ್ರಮ ನಡೆದು ಬಂದಿದೆ. ಇದನ್ನು ವಾಹಿನಿ ಕುಟುಂಬದ ಕಾರ್ಯಕ್ರಮ ಎಂದೇ ಹೇಳುತ್ತದೆ. ಬಿಗ್ ಬಾಸ್ ಮನೆ ಪ್ರವೇಶಿಸುವ ಮೂಲಕ ಶೈನ್ ಶೆಟ್ಟಿ ಕೂಡ ಕಲರ್ಸ್ ಕನ್ನಡ ವಾಹಿನಿಯ ಭಾಗವಾದರು. ಈ ಕಾರಣಕ್ಕೆ ಅವರು ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಅಕ್ಟೋಬರ್ 15,16,17ರಂದು ಸಂಜೆ 7ಗಂಟೆಗೆ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗಲಿದೆ. ಅನುಬಂಧ ಅವಾರ್ಡ್ ಅನ್ನೋದು ತುಂಬಾನೇ ದೊಡ್ಡ ಕಾರ್ಯಕ್ರಮ. ಹೀಗಾಗಿ, ಇದರ ಮೇಕಿಂಗ್ಗೆ ಹೆಚ್ಚಿನ ಸಮಯ ಹಿಡಿದಿರುತ್ತದೆ. ಈ ಕಾರಣಕ್ಕೆ ವಾಹಿನಿ ಇದರ ಮೇಕಿಂಗ್ ವಿಡಿಯೋ ಪ್ರಸಾರ ಮಾಡುತ್ತಿದೆ. ಭಾನುವಾರ (ಅಕ್ಟೋಬರ್ 10) ಸಂಜೆ 4:30ಕ್ಕೆ ಮೇಕಿಂಗ್ ಪ್ರಸಾರವಾಗಲಿದೆ.
View this post on Instagram
ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದರಲ್ಲಿ, ಯುವತಿ ಒಬ್ಬಳು ಬಂದು ಶೈನ್ ಶೆಟ್ಟಿ ಮೈ ಮೇಲೆ ಬೀಳುತ್ತಾಳೆ. ಈ ವೇಳೆ ಶೈನ್ ಶೆಟ್ಟಿ, ಇಲ್ಲ ನನಗೆ ಸುಕೃತಾ ಎಂಬುವವರ ಜತೆ ಮದುವೆ ಫಿಕ್ಸ್ ಆಗಿದೆ ಎಂದು ಹೇಳುತ್ತಲೇ ಸುಕೃತಾಗೆ ಕರೆ ಮಾಡಿ ಮುದ್ದು ಎಂದೆಲ್ಲ ಕರೆದಿದ್ದಾರೆ. ಈ ವಿಡಿಯೋ ಮಾಡಿದ್ದೇಕೆ? ಎಂಬಿತ್ಯಾದಿ ಪ್ರಶ್ನೆಗೆ ಮೇಕಿಂಗ್ನಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ: ಅಳಿಸಿದ್ದಾಯ್ತು, ನಗಿಸಿದ್ದಾಯ್ತು.. ಈಗ ಭಯ ಹುಟ್ಟಿಸುವ ಲುಕ್ನಲ್ಲಿ ಶ್ರುತಿ; ಹುಟ್ಟುಹಬ್ಬಕ್ಕೆ ಖಡಕ್ ಪೋಸ್ಟರ್
ಕನ್ನಡ ಬಿಗ್ ಬಾಸ್ನಿಂದ ಹೊರ ಬಂದ ರಘು ಗೌಡ ಗತಿ ನೋಡಿ ನಕ್ಕ ಶೈನ್ ಶೆಟ್ಟಿ
Published On - 1:39 pm, Sat, 9 October 21