ನನ್ನ ಮತ್ತು ಉಪೇಂದ್ರ ಮದುವೆ ಬಗ್ಗೆ ಯಶ್​ ಯಾವಾಗಲೂ ಆ ಪ್ರಶ್ನೆ ಕೇಳ್ತಾರೆ; ಪ್ರಿಯಾಂಕಾ ಉಪೇಂದ್ರ

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ರಾಜಾ-ರಾಣಿ’ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರತಿವಾರ ಸ್ಟಾರ್ ಕಲಾವಿದರು ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಉಪೇಂದ್ರ ಅವರ ಪತ್ನಿ, ನಟಿ ಪ್ರಿಯಾಂಕಾ ಅವರು ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ನನ್ನ ಮತ್ತು ಉಪೇಂದ್ರ ಮದುವೆ ಬಗ್ಗೆ ಯಶ್​ ಯಾವಾಗಲೂ ಆ ಪ್ರಶ್ನೆ ಕೇಳ್ತಾರೆ; ಪ್ರಿಯಾಂಕಾ ಉಪೇಂದ್ರ
ಪ್ರಿಯಾಂಕಾ-ಉಪೇಂದ್ರ ಮತ್ತು ಯಶ್​

ಉಪೇಂದ್ರ ಅವರು ಸಾಕಷ್ಟು ಅದ್ಭುತ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಕೆಲ ಸಿನಿಮಾಗಳಲ್ಲಿ ಅವರು ತುಂಬಾನೇ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾದರೆ, ಉಪೇಂದ್ರ ಅವರು ಮನೆಯಲ್ಲಿ ಎಷ್ಟು ರೊಮ್ಯಾಂಟಿಕ್​? ಈ ಪ್ರಶ್ನೆಗೆ ಪ್ರಿಯಾಂಕಾ ಉಪೇಂದ್ರ ಅವರು ಉತ್ತರ ನೀಡಿದ್ದಾರೆ. ಆನ್​​ ಸ್ಕ್ರೀನ್​ನಲ್ಲಿ ಇದ್ದಂತೆ ಅವರು ಆಫ್​​ ​ಸ್ಕ್ರೀನ್​ನಲ್ಲಿ ಇಲ್ಲ ಎಂದಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ‘ರಾಜಾ-ರಾಣಿ’ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಪ್ರತಿವಾರ ಸ್ಟಾರ್ ಕಲಾವಿದರು ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಉಪೇಂದ್ರ ಅವರ ಪತ್ನಿ, ನಟಿ ಪ್ರಿಯಾಂಕಾ ಅವರು ವಿಶೇಷ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಈ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. ಅಲ್ಲದೆ, ಅವರಿಗೆ ಕೆಲ ಪ್ರಶ್ನೆಗಳನ್ನು ಕೂಡ ಕೇಳಲಾಗಿದೆ.

‘ಉಪೇಂದ್ರ ಅವರು ಅದ್ಭುತ ನಿರ್ದೇಶಕ ಅನ್ನೋದು ಎಲ್ಲರಿಗೂ ಗೊತ್ತು. ಅವರು ಎಲ್ಲರಿಗೂ ಸ್ಫೂರ್ತಿ. ಮನೆಯಲ್ಲಿ ಪತಿಯಾಗಿ ಅವರು ಹೇಗೆ ಇರ್ತಾರೆ?’ ಎಂದು ನಿರೂಪಕಿ ಅನುಪಮಾ ಗೌಡ ಅವರು ಪ್ರಶ್ನೆ ಮಾಡಿದರು. ಇದಕ್ಕೆ ಜಡ್ಜ್ ಆಸನದಲ್ಲಿ ಕುಳಿತಿದ್ದ ಸೃಜನ್​ ಲೋಕೇಶ್​ ‘ಹೆದರಿಕೊಂಡು ಇರ್ತಾರೆ’ ಎನ್ನುವ ಉತ್ತರ ನೀಡಿದರು. ಇದನ್ನು ಪ್ರಿಯಾಂಕಾ ಉಪೇಂದ್ರ ಅಲ್ಲಗಳೆದರು.

ಮನೆಯಲ್ಲಿ ಯಾರು ಡೈರೆಕ್ಟರ್​ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರಿಯಾಂಕಾ ಕೊಟ್ಟ ಉತ್ತರ ವಿಶೇಷವಾಗಿತ್ತು. ‘ನಮ್ಮ ಮನೆಯಲ್ಲಿ ಡೈರೆಕ್ಟರ್​ ಅಂತ ಯಾರೂ ಇಲ್ಲ. ನಮ್ಮದು ಜಾಯಿಂಟ್​ ಪ್ರೊಡಕ್ಷನ್​. ನಮ್ಮ ಪಾತ್ರಗಳೂ​ ಬದಲಾಗುತ್ತಲೇ ಇರುತ್ತವೆ’ ಎಂದರು ಅವರು.

ಉಪ್ಪಿ ಸರ್​ ಆನ್​ ಸ್ಕ್ರೀನ್​ನಲ್ಲಿ​ ಬಹಳವೇ ರೊಮ್ಯಾಂಟಿಕ್​, ಆಫ್ ಸ್ಕ್ರೀನ್​ನಲ್ಲಿ ಅವರು ಎಷ್ಟು ರೊಮ್ಯಾಂಟಿಕ್? ಎಂದು ಪ್ರಿಯಾಂಕಾ ಮುಂದೆ ಪ್ರಶ್ನೆ ಇಡಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಅಂತ ಅವರು ಹೇಳಿದ್ದಾರೆ. ಹೀಗಿರುವಾಗ ರೊಮ್ಯಾಂಟಿಕ್​ ಎಲ್ಲಿಂದ ಬಂತು? ಯಶ್​ ಅವರು ಇಂದಿಗೂ ‘ಉಪೇಂದ್ರ ಅವರನ್ನು ಹೇಗೆ ಮದುವೆ ಆದ್ರಿ? ಅವರಿಗೆ  ಏನ್ ಮೋಡಿ​ ಮಾಡಿದ್ರಿ ಅಂತ ಕೇಳ್ತಾರೆ. ಉಪೇಂದ್ರ ಅವರು ಮದುವೆಯನ್ನೇ ಆಗಲ್ಲ ಎಂದು ಯಶ್​ ಭಾವಿಸಿದ್ದರಂತೆ’ ಎಂದರು ಪ್ರಿಯಾಂಕಾ.

ಇದನ್ನೂ ಓದಿ: 750 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ ಸಿನಿಮಾ; ಈ ಸ್ಟಾರ್​ ನಟರ ಸಂಭಾವನೆ 75 ಕೋಟಿ

ನನಗೆ ಸುಕೃತಾ ಜತೆ ಮದುವೆ ಫಿಕ್ಸ್​ ಆಗಿದೆ ಎಂದ ಬಿಗ್​ ಬಾಸ್​ ಶೈನ್ ಶೆಟ್ಟಿ

Read Full Article

Click on your DTH Provider to Add TV9 Kannada