‘ನಮ್ಮ ಮನೆಯಲ್ಲೂ ಹೆಂಡತಿ ಗದರುತ್ತಾರೆ’; ‘ಅನುಬಂಧ’ ಕಾರ್ಯಕ್ರಮದಲ್ಲಿ ಅಚ್ಚರಿ ವಿಚಾರ ಬಿಚ್ಚಿಟ್ಟ ಸಿಎಂ ಬಸವರಾಜ ಬೊಮ್ಮಾಯಿ

TV9 Digital Desk

| Edited By: Rajesh Duggumane

Updated on: Oct 08, 2021 | 4:15 PM

ಕಿರುತೆರೆ ವ್ಯಾಪ್ತಿ ದಿನಕಳೆದಂತೆ ವಿಸ್ತರಣೆ ಆಗುತ್ತಲೇ ಇದೆ. ಸಿನಿಮಾ ನಿರ್ಮಾಣದ ಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದಕ್ಕಿಂತ ಒಂದು ಧಾರಾವಾಹಿ ಅದ್ದೂರಿಯಾಗಿ ಮೂಡಿ ಬರುತ್ತಿದೆ.

‘ನಮ್ಮ ಮನೆಯಲ್ಲೂ ಹೆಂಡತಿ ಗದರುತ್ತಾರೆ’; ‘ಅನುಬಂಧ’ ಕಾರ್ಯಕ್ರಮದಲ್ಲಿ ಅಚ್ಚರಿ ವಿಚಾರ ಬಿಚ್ಚಿಟ್ಟ ಸಿಎಂ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಂಬಾನೇ ಸಿಂಪಲ್​ ಅನ್ನೋದು ಜನರಿಗೆ ಮನವರಿಕೆ ಆಗಿದೆ. ಈಗಾಗಲೇ ಅವರು ಸಾಕಷ್ಟು ಮನರಂಜನಾ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡ ಉದಾಹರಣೆ ಇದೆ. ಈಗ ಬಸವರಾಜ ಬೊಮ್ಮಾಯಿ ಅವರು ಕಲರ್ಸ್​ ಕನ್ನಡದ ‘ಅನುಬಂಧ’ ಅವಾರ್ಡ್ಸ್​ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದಾರೆ. ಇದರ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಕಿರುತೆರೆ ವ್ಯಾಪ್ತಿ ದಿನಕಳೆದಂತೆ ವಿಸ್ತರಣೆ ಆಗುತ್ತಲೇ ಇದೆ. ಸಿನಿಮಾ ನಿರ್ಮಾಣದ ಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದಕ್ಕಿಂತ ಒಂದು ಧಾರಾವಾಹಿ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಇದರ ಜತೆಗೆ ವರ್ಷಕ್ಕೆ ಒಂದು ಬಾರಿ ಧಾರಾವಾಹಿ ಕಲಾವಿದರನ್ನು ಒಟ್ಟಿಗೆ ಸೇರಿಸಲಾಗುತ್ತದೆ. ಈಗ ಕಲರ್ಸ್​ ಕನ್ನಡ ವಾಹಿನಿ ಅನುಬಂಧ ಅವಾರ್ಡ್ಸ್​ನೊಂದಿಗೆ ವೀಕ್ಷಕರ ಎದುರು ಬರುತ್ತಿದೆ. ಕಲರ್ಸ್​ ಕನ್ನಡ ಪ್ರತಿಬಾರಿ ಈ ಕಾರ್ಯಕ್ರಮವನ್ನು ಹಬ್ಬದ ರೀತಿಯಲ್ಲಿ ನಡೆಸುತ್ತದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ಇಟ್ಟುಕೊಂಡು ವಿವಿಧ ರೀತಿಯ ಅವಾರ್ಡ್​ ನೀಡಲಾಗುತ್ತದೆ. ಇದಕ್ಕೆ ಬಸವರಾಜ ಬೊಮ್ಮಾಯಿ ಅವರು ವಿಶೇಷ ಅತಿಥಿಯಾಗಿ ಬಂದಿದ್ದು ವಿಶೇಷವಾಗಿತ್ತು. ಅವರಿಗೆ ಕೆಲ ಪ್ರಶ್ನೆಗಳನ್ನು ಕೂಡ ಕೇಳಲಾಯಿತು.

‘ಮಧ್ಯಮ ವರ್ಗದ ಮನೆಗಳಲ್ಲಿ ಸಣ್ಣಸಣ್ಣ ಕಾರಣಗಳಿಗೆ ಜಗಳ ಆಗುತ್ತದೆ. ಮುಖ್ಯಮಂತ್ರಿ ಮನೆಯಲ್ಲಿ ಯಾವುವಾದರೂ ವಿಚಾರಕ್ಕೆ ಜಗಳ ಆಗುತ್ತದಾ’ ಎಂದು ನಿರೂಪಕ ಅಕುಲ್​ ಬಾಲಾಜಿ ಅವರು ಬೊಮ್ಮಾಯಿಗೆ ಪ್ರಶ್ನೆ ಮಾಡಿದರು. ಇದಕ್ಕೆ ಅವರು ಕೊಟ್ಟ ಉತ್ತರ ವಿಶೇಷವಾಗಿತ್ತು.

‘ನಮ್ಮ ಮನೆಯೂ ಸಾಮಾನ್ಯರ ಸಂಸಾರ ಇದ್ದಂತೆ. ನಲ್ಲಿ, ಎಲೆಕ್ಟ್ರಿಸಿಟಿ ಎಲ್ಲಾ ಕಡೆ ಹೇಗಿದೆಯೋ ನಮ್ಮ ಮನೆಯಲ್ಲೂ ಹಾಗೆಯೇ ಇದೆ. ನಾನು ಸಿಎಂ ಎಂದ ಮಾತ್ರಕ್ಕೆ ಅವು ಬದಲಾಗುವುದಿಲ್ಲ. ನಿಮ್ಮ ಮನೆಯಲ್ಲಿ ಹೆಂಡತಿ ಗದರಬಹುದು, ನಮ್ಮ ಮನೆಯಲ್ಲೂ ಹಾಗೆಯೇ ಹೆಂಡತಿ ಗದರುತ್ತಾರೆ ಎಂದರು’ ಬಸವರಾಜ ಬೊಮ್ಮಾಯಿ. ಇದನ್ನು ಕೇಳಿ ಅಲ್ಲಿದ್ದವರು ನಕ್ಕರು.

ಅಕ್ಟೋಬರ್​ 15,16,17ರಂದು ಸಂಜೆ 7ಗಂಟೆಗೆ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ನಡೆಯಲಿದೆ.  ಕೊವಿಡ್​ ನಿಧಾನವಾಗಿ ತಗ್ಗಿದ್ದರಿಂದ ಈ ಬಾರಿ ಅದ್ದೂರಿಯಾಗಿಯೇ ಕಾರ್ಯಕ್ರಮ ನಡೆಯುತ್ತಿದೆ. ಇನ್ನು ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಕೂಡ ಇರಲಿವೆ.

ಇದನ್ನೂ ಓದಿ: ಅವಮಾನ ಮಾಡಿದವರಿಗೆ ಕಿಚ್ಚ ಸುದೀಪ್​ ಎದುರೇ ಉತ್ತರಿಸಿದ ‘ಕನ್ನಡತಿ’ ಕಿರಣ್​ ರಾಜ್​

ಶೀಘ್ರವೇ ನಡೆಯಲಿದೆ ಅನುಬಂಧ ಅವಾರ್ಡ್ಸ್​; ನೀವು ವೋಟ್​ ಮಾಡಬಹುದು

ತಾಜಾ ಸುದ್ದಿ

Related Stories

Click on your DTH Provider to Add TV9 Kannada