ಉತ್ತಮ ಗುಣಮಟ್ಟದ ಕೆಮೆರಾ ಮತ್ತು ಬ್ಯಾಟರಿಯುಳ್ಳ ಸ್ಮಾರ್ಟ್​ಪೋನ್​ಗಳು ರೂ. 10,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿವೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 28, 2021 | 10:15 PM

48 ಮೆಗಾ ಪಿಕ್ಸೆಲ್ ಕೆಮೆರಾ, 6,000 ಎಮ್ ಎ ಎಚ್ ಬ್ಯಾಟರಿ ಲೈಫ್ ಉಳ್ಳ ಸ್ಯಾಮ್ಸಂಗ್ ಗೆಲಾಕ್ಸಿ ಎಫ್ 12 ಫೋನ್ ರೂ. 9,499 ಗಳಿಗೆ ಮಾರಾಟವಾಗುತ್ತಿದೆ.

ನಿಮಗೊಂದು ವಿಷಯ ಗೊತ್ತಾ? ಪ್ರಪಂಚದ ಶ್ರೀಮಂತ ಕುಳಗಳಲ್ಲಿ ಒಬ್ಬರಾಗಿರುವ ವಾರೆನ್ ಬಫೆಟ್ ಇದುವರೆಗೆ ಮೊಬೈಲ್ ಫೋನನ್ನೇ ಬಳಸಿಲ್ಲವಂತೆ. 91 ವರ್ಷ ವಯಸ್ಸಿನ ಬಫೆಟ್ ಈಗಲೂ ಲ್ಯಾಂಡ್ ಲೈನ್ ಪೋನ್ಗಳನ್ನೇ ಬಳಸುತ್ತಾರೆ. ಆಶ್ಚರ್ಯವಲ್ಲವೇ? ಬಡವ-ಬಲ್ಲಿದರೂ ಮೊಬಲ್ ಫೋನ್ ಉಪಯೋಗಿಸುತ್ತಿರುವ ಇಂದಿನ ಜಮಾನಾದಲ್ಲಿ ಬಫೆಟ್ ಅದರ ಸಹವಾಸವೇ ಬೇಡ ಅನ್ನುತ್ತಾರೆ. ಅವರ ವಿಷಯವನ್ನು ಇಲ್ಲಿಗೆ ಬಿಡೋಣ ಮಾರಾಯ್ರೇ. ಅವರ ಕತೆ, ಅಭಿರುಚಿ, ಆಸಕ್ತಿ ಕೇಳಿಸಿಕೊಂಡು ನಮಗೂ ಮೊಬೈಲ್ ಫೋನ್ ಗಳ ಮೇಲೆ ವೈರಾಗ್ಯ ಹುಟ್ಟಿದರೆ ಬದುಕು ಕಷ್ಟವಾಗುತ್ತದೆ.

ಓಕೆ ಫೋನ್​ಗಳ ವಿಷಯ ಯಾಕೆ ಬಂತು ಅಂದರೆ, ನಾವು ರೂ. 6,000 ಮತ್ತು ರೂ. 8,000 ಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿರುವ ಸ್ಪಾರ್ಟ್​ಪೋನ್​​ಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಇಂದು ರೂ. 10,000 ಗಳಿಗಿಂತ ಕಮ್ಮಿ ಬೆಲೆಯ ಫೋನ್​ಗಳ ಕಡೆ ಗಮನ ಹರಿಸುವ. ಉತ್ತಮ ಗುಣಮಟ್ಟದ ಫೋನ್​ಗಳ ಬಗ್ಗೆ ಮಾತಾಡುವಾಗ ಕೆಮೆರಾ, ಬ್ಯಾಟರಿಗಳ ಪ್ರಸ್ತಾಪ ಆಗುತ್ತದೆ.

ಓಕೆ, 48 ಮೆಗಾ ಪಿಕ್ಸೆಲ್ ಕೆಮೆರಾ, 6,000 ಎಮ್ ಎ ಎಚ್ ಬ್ಯಾಟರಿ ಲೈಫ್ ಉಳ್ಳ ಸ್ಯಾಮ್ಸಂಗ್ ಗೆಲಾಕ್ಸಿ ಎಫ್ 12 ಫೋನ್ ರೂ. 9,499 ಗಳಿಗೆ ಮಾರಾಟವಾಗುತ್ತಿದೆ. ಹಾಗೆಯೇ, 13 ಮೆಗಾ ಪಿಕ್ಸೆಲ್ ಕೆಮೆರಾ ಮತ್ತು 6,000 ಎಮ್ ಎ ಎಚ್ ಬ್ಯಾಟರಿ ಲೈಫ್ ಉಳ್ಳ ರಿಯಲ್ಮಿ ನಾರ್ಜೋ 30ಎ ಪೋನ್ ನಿಮಗೆ ರೂ. 8,999 ಗಳಿಗೆ ಸಿಗುತ್ತದೆ.

5,000 ಎಮ್ ಎ ಎಚ್ ಬ್ಯಾಟರಿ ಲೈಫ್ ಮತ್ತು 13 ಮೆಗಾ ಪಿಕ್ಸೆಲ್ ಕೆಮೆರಾದೊಂದಿಗೆ ಬರುವ ರೀಯಲ್ಮಿ ನಾರ್ಜೋ 30ಎ ಫೋನ್ ಕೇವಲ ರೂ. 6,799 ಕ್ಕೆ ಸಿಗಲಿದೆ. ಈ ಕೆಟೆಗಿರಿಯ ಕೊನೆಯ ಫೋನೆಂದರೆ 5,000 ಎಮ್ ಎ ಎಚ್ ಬ್ಯಾಟರಿ ಲೈಫ್ ಉಳ್ಳ ಮತ್ತು 8 ಮೆಗಾ ಪಿಕ್ಸೆಲ್ ಕೆಮೆರಾ ಹೊಂದಿರುವ ರೀಯಲ್ಮೀ 30 ಎ. ಇದರ ಬೆಲೆ ರೂ. 7,499.

ಇದನ್ನೂ ಓದಿ:   Viral Video: ಕೊಂಚ ತಡವಾಗಿದ್ದರೂ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದರು ತಾಯಿ-ಮಗು; ಶಾಕಿಂಗ್ ವಿಡಿಯೋ ಇಲ್ಲಿದೆ