ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!

Edited By:

Updated on: Jan 30, 2026 | 11:40 AM

ಗದಗ, ಜನವರಿ 30: ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನ ಕಾರ್ಯದಲ್ಲಿ ಹಾವು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದೆ. ಕಳೆದ 13 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಉತ್ಖನನದಲ್ಲಿ ಈವರೆಗೆ 45ಕ್ಕೂ ಹೆಚ್ಚು ಪ್ರಾಚ್ಯಾವಶೇಷ ವಸ್ತುಗಳು, ನಿರ್ದಿಷ್ಟವಾಗಿ ಮೂರು ನಾಗರಶಿಲೆಗಳು ಪತ್ತೆಯಾಗಿದ್ದವು. ನಿನ್ನೆ ಮೂರು ಹೆಡೆಯ ಸರ್ಪ ಶಿಲೆ ದೊರೆತ ಬೆನ್ನಲ್ಲೇ, ಇಂದು ಬೆಳಗ್ಗೆ ಉತ್ಖನನ ಸ್ಥಳದ ಎ ಬ್ಲಾಕ್‌ನಲ್ಲಿ ಸುಮಾರು 2-2.5 ಅಡಿ ಉದ್ದದ ಹಾವು ಪ್ರತ್ಯಕ್ಷವಾಗಿದೆ. ಈ ಘಟನೆ ಲಕ್ಕುಂಡಿಯ ನಿಧಿಗಳನ್ನು ಸರ್ಪಗಳು ಕಾಯುತ್ತವೆ ಎಂಬ ಸ್ಥಳೀಯರ ನಂಬಿಕೆ ಮತ್ತು ಚರ್ಚೆಗಳಿಗೆ ಹೊಸ ಆಯಾಮ ನೀಡಿದೆ. ಬೆಳಗ್ಗೆ 8:30ರ ಸುಮಾರಿಗೆ ಹಾವು ಕಾಣಿಸಿಕೊಂಡಿದ್ದು, ಸ್ಥಳೀಯ ಸೆಕ್ಯೂರಿಟಿ ಗಾರ್ಡ್‌ಗಳು ಮತ್ತು ನಿವಾಸಿಗಳು ಇದನ್ನು ಕಣ್ಣಾರೆ ಕಂಡಿದ್ದಾರೆ ಹಾಗೂ ವಿಡಿಯೋ ಸಹ ಸೆರೆಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.