Video: ಬಾಯಲ್ಲಿ ಮೀನು ಕಚ್ಚಿಕೊಂಡು ಪ್ರವಾಹದ ನೀರಲ್ಲಿ ಹಾವಿನ ಈಜಾಟ

Updated on: Sep 27, 2025 | 10:49 AM

ಕೋಲ್ಕತ್ತಾದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರವಾಹದ ನೀರಿನಲ್ಲಿ ಹಾವೊಂದು ಮೀನನ್ನು ಬಾಯಲ್ಲಿ ಕಚ್ಚಿಕೊಂಡು ಈಜಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅತ್ರೇಯಿ ಮಿತ್ರ ಎಂಬ ಬಳಕೆದಾರರು ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಹಾವು ಚೆಕರ್ಡ್ ಕೀಲ್‌ಬ್ಯಾಕ್ ಹಾವಿನಂತೆ ಕಾಣುತ್ತದೆ, ಇದನ್ನು ಸ್ಥಳೀಯವಾಗಿ ಜೋಲ್ ಧೋರಾ ಎಂದು ಕರೆಯಲಾಗುತ್ತದೆ. ಈ ಹಾವು ವಿಷಕಾರಿಯಲ್ಲ .ಸೆಪ್ಟೆಂಬರ್ 23 ರಂದು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಮೇಘಸ್ಫೋಟದಿಂದಾಗಿ ನಗರದ ಹಲವು ಭಾಗಗಳಲ್ಲಿ ತೀವ್ರ ನೀರು ನಿಂತಿತ್ತು. ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ಥವಾಗಿತ್ತು.

ಕೋಲ್ಕತ್ತಾ, ಸೆಪ್ಟೆಂಬರ್ 27: ಕೋಲ್ಕತ್ತಾದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದೆ. ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಈ ಪ್ರವಾಹದ ನೀರಿನಲ್ಲಿ ಹಾವೊಂದು ಮೀನನ್ನು ಬಾಯಲ್ಲಿ ಕಚ್ಚಿಕೊಂಡು ಈಜಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅತ್ರೇಯಿ ಮಿತ್ರ ಎಂಬ ಬಳಕೆದಾರರು ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಹಾವು ಚೆಕರ್ಡ್ ಕೀಲ್‌ಬ್ಯಾಕ್ ಹಾವಿನಂತೆ ಕಾಣುತ್ತದೆ, ಇದನ್ನು ಸ್ಥಳೀಯವಾಗಿ ಜೋಲ್ ಧೋರಾ ಎಂದು ಕರೆಯಲಾಗುತ್ತದೆ. ಈ ಹಾವು ವಿಷಕಾರಿಯಲ್ಲ .ಸೆಪ್ಟೆಂಬರ್ 23 ರಂದು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಗೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಮೇಘಸ್ಫೋಟದಿಂದಾಗಿ ನಗರದ ಹಲವು ಭಾಗಗಳಲ್ಲಿ ತೀವ್ರ ನೀರು ನಿಂತಿತ್ತು. ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ಥವಾಗಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ