ನೀತು ಎಲಿಮಿನೇಟ್​ ಆದ್ರೆ ದೊಡ್ಮನೆಯಿಂದ ಹೊರಗೆ ಬರೋದು ಸ್ನೇಹಿತ್​; ಬಿಗ್​ ಶಾಕ್​ ಕೊಟ್ಟ ಸುದೀಪ್​

Updated on: Nov 19, 2023 | 5:11 PM

ನೀತು ವನಜಾಕ್ಷಿ ಡೇಂಜರ್​ ಜೋನ್​ನಲ್ಲಿ ಇದ್ದಾರೆ. ಈ ಮೊದಲು ಸ್ನೇಹಿತ್​ ಅವರು ನೀತುಗೆ ಒಂದು ಮಾತು ನೀಡಿದ್ದರು. ‘ನಿಮಗಾಗಿ ಏನು ಬೇಕಾದರೂ ಮಾಡ್ತೀನಿ’ ಎಂದು ಹೇಳಿದ್ದರು. ಈಗ ಎಲಿಮಿನೇಷನ್​ ಸಮಯದಲ್ಲಿ ಆ ಮಾತು ನಡೆಸಿಕೊಡುತ್ತೀರಾ ಎಂದು ಸುದೀಪ್​ ಕೇಳಿದ್ದಾರೆ. ಮೊದಲಿಗೆ ನೋ ಎಂದ ಸ್ನೇಹಿತ್​ ನಂತರ ಒಪ್ಪಿಕೊಂಡಿದ್ದಾರೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada) ರಿಯಾಲಿಟಿ ಶೋನ ಆರನೇ ವಾರದಲ್ಲಿ ಎರಡು ಎಲಿಮಿನೇಷನ್​ನ ನಡೆಯಲಿದೆ ಎಂದು ಮೊದಲೇ ತಿಳಿಸಲಾಗಿತ್ತು. ಶನಿವಾರ (ನ.18) ಈಶಾನಿ ಔಟ್​ ಆಗಿದ್ದಾರೆ. ಭಾನುವಾರ (ನ.19) ಯಾರು ಎಲಿಮಿನೇಟ್​ ಆಗುತ್ತಾರೆ ಎಂಬುದನ್ನು ತಿಳಿಯುವ ಕುತೂಹಲ ಮೂಡಿದೆ. ನೀತು ವನಜಾಕ್ಷಿ (Neethu Vanajakshi) ಅವರು ಡೇಂಜರ್​ ಜೋನ್​ನಲ್ಲಿ ಇದ್ದಾರೆ. ಈ ಮೊದಲು ಸ್ನೇಹಿತ್​ ಅವರು ನೀತುಗೆ ಒಂದು ಮಾತು ನೀಡಿದ್ದರು. ‘ನಿಮಗಾಗಿ ಏನು ಬೇಕಾದರೂ ಮಾಡ್ತೀನಿ’ ಎಂದು ಹೇಳಿದ್ದರು. ಈಗ ಎಲಿಮಿನೇಷನ್​ ಸಮಯದಲ್ಲಿ ಆ ಮಾತು ನಡೆಸಿಕೊಡುತ್ತೀರಾ ಎಂದು ಸುದೀಪ್​ ಕೇಳಿದ್ದಾರೆ. ಮೊದಲಿಗೆ ನೋ ಎಂದ ಸ್ನೇಹಿತ್​ (Snehith Gowda) ನಂತರ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ನೀತು ಎಲಿಮಿನೇಟ್​ ಆದರೆ ಅವರ ಬದಲಿಗೆ ಸ್ನೇಹಿತ್​ ಔಟ್​ ಆಗಬೇಕಾಗುತ್ತದೆ. ಆ ಮೂಲಕ ದೊಡ್ಮನೆಯಲ್ಲಿ ಟೆನ್ಷನ್​ ಹೆಚ್ಚಾಗಿದೆ. ‘ಕಲರ್ಸ್​ ಕನ್ನಡ’ದಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್​ ಬಾಸ್​ ಪ್ರಸಾರ ಆಗುತ್ತಿದೆ. ‘ಜಿಯೋ ಸಿನಿಮಾ’ ಮೂಲಕ 24 ಗಂಟೆಯೂ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More