Solar Eclipse 2026: ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

Updated on: Feb 14, 2026 | 11:08 AM

ಡಾ. ಬಸವರಾಜ ಗುರೂಜಿ ಅವರು 2026ರ ರಾಹುಗ್ರಸ್ತ ಸೂರ್ಯಗ್ರಹಣವು ಧನುಸ್ಸು ರಾಶಿಯವರಿಗೆ ಅತ್ಯಂತ ಶುಭಕರ ಎಂದು ವಿವರಿಸಿದ್ದಾರೆ. ಗ್ರಹಣವು ಮೂರನೇ ಮನೆಯಲ್ಲಿ ಸಂಭವಿಸುವುದರಿಂದ ಆದಾಯ ವೃದ್ಧಿ, ಸಂಬಂಧಗಳಲ್ಲಿ ಸುಧಾರಣೆ, ಆರೋಗ್ಯ ವೃದ್ಧಿ, ಹಾಗೂ ವೃತ್ತಿಜೀವನದಲ್ಲಿ ಪ್ರಗತಿಯಂತಹ ಸಕಾರಾತ್ಮಕ ಫಲಿತಾಂಶಗಳು ನಿಮ್ಮದಾಗಲಿದೆ ಎಂದು ಸಲಹೆ ನೀಡಿದ್ದಾರೆ.

ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರ ರಾಹುಗ್ರಸ್ತ ಸೂರ್ಯಗ್ರಹಣವು ಧನುಸ್ಸು ರಾಶಿಯವರಿಗೆ ಅತ್ಯಂತ ಶುಭಕರವಾಗಿದೆ. ರಾಶ್ಯಾಧಿಪತಿ ಗುರು ವಕ್ರಗತಿಯಲ್ಲಿದ್ದು ಮಿಥುನದಲ್ಲಿದ್ದಾನೆ. ಗ್ರಹಣವು ಧನುಸ್ಸು ರಾಶಿಯವರಿಗೆ ಮೂರನೇ ಮನೆಯಲ್ಲಿ ಸಂಭವಿಸುತ್ತಿದ್ದು, ಇದು ಸಾಮಾನ್ಯವಾಗಿ ಮಂಗಳಕರವಾಗಿದೆ. ಗುರುವಿನ ದೃಷ್ಟಿಯು ಗ್ರಹಣದ ಮೇಲಿರುವುದರಿಂದ ಯಾವುದೇ ದೋಷಗಳು ಅಂಟುವುದಿಲ್ಲ ಎಂದು ಹೇಳಲಾಗಿದೆ.

ಮೂಲಾ, ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರದವರಿಗೆ ಈ ಗ್ರಹಣವು ಜಾಕ್ ಪಾಟ್ ಅಥವಾ ಡಬಲ್ ಧಮಾಕದಂತಹ ಫಲಿತಾಂಶಗಳನ್ನು ನೀಡುತ್ತದೆ. ಆದಾಯ ವೃದ್ಧಿ, ಸಹೋದರರೊಂದಿಗೆ ಉತ್ತಮ ಸಂಬಂಧಗಳು, ಬಂಧುಮಿತ್ರರೊಂದಿಗೆ ಪ್ರೀತಿ ವಿಶ್ವಾಸ, ಹೊಸ ವ್ಯಾಪಾರಕ್ಕೆ ಪ್ರಯತ್ನ, ಅರ್ಧಂಬರ್ಧ ನಿಂತ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಆರೋಗ್ಯದಲ್ಲಿ ಸುಧಾರಣೆ, ಉನ್ನತ ಶಿಕ್ಷಣಕ್ಕೆ ಶುಭ, ಹಾಗೂ ವಿಚ್ಛೇದನ ಹಂತದಲ್ಲಿರುವ ಸಂಬಂಧಗಳಲ್ಲಿ ರಾಜಿ ಏರ್ಪಡುವ ಸೂಚನೆಗಳಿವೆ. ರಾಜಕೀಯವಾಗಿ ಪ್ರಗತಿ, ಉದ್ಯಮಿದಾರರಿಗೆ ಲಾಭ ಹಾಗೂ ಕೆಲಸ ಕಾರ್ಯಗಳಲ್ಲಿ ಶುಭ ಫಲ ಇರಲಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 14, 2026 11:04 AM
Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More