Somanna taunts Kateel: ಬಿಜೆಪಿ ರಾಜ್ಯಾಧ್ಯಕ್ಷನಾದರೆ ಸ್ಥಾನಕ್ಕೆ ಗಾಂಭೀರ್ಯ ತಂದುಕೊಡುವುದಾಗಿ ವಿ ಸೋಮಣ್ಣ ಹೇಳಿದ್ದು ಯಾಕೆ?

Somanna taunts Kateel: ಬಿಜೆಪಿ ರಾಜ್ಯಾಧ್ಯಕ್ಷನಾದರೆ ಸ್ಥಾನಕ್ಕೆ ಗಾಂಭೀರ್ಯ ತಂದುಕೊಡುವುದಾಗಿ ವಿ ಸೋಮಣ್ಣ ಹೇಳಿದ್ದು ಯಾಕೆ?

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 23, 2023 | 6:54 PM

ಎಲ್ಲರನ್ನು ಒಗ್ಗೂಡಿಸಿಕೊಂಡು ಹಿರಿಯ ನಾಯಕರ ಸಾಮರ್ಥಕ್ಕೆ ಅನುಗುಣವಾಗಿ ಜವಾಬ್ದಾರಿಯನ್ನು ವಹಿಸಿಕೊಟ್ಟು ಪಕ್ಷವನ್ನು ಬಲಪಡಿಸುವುದಾಗಿ ಸೋಮಣ್ಣ ಹೇಳಿದರು

ಬೆಂಗಳೂರು: ಮಾಜಿ ಶಾಸಕ ವಿ ಸೋಮಣ್ಣ (V Somanna) ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾಗಲು (state unit president) ದೃಢ ಸಂಕಲ್ಪ ಮಾಡಿಕೊಂಡಂತಿದೆ. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಸೋಮಣ್ಣ, ಇದಕ್ಕೆ ಮೊದಲು ಸಹ ಎರಡು ಮೂರು ಸಲ ಅಧ್ಯಕ್ಷನನ್ನಾಗಿ ಮಾಡಿ ಅಂತ ವರಿಷ್ಠರನ್ನು ಕೇಳಿಯಾಗಿದೆ ಎಂದು ಹೇಳಿ ಪರೋಕ್ಷವಾಗಿ ಈಗಿನ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರ ಕಾರ್ಯವೈಖರಿಯನ್ನು ಟೀಕಿಸಿದರು. ತಮ್ಮನ್ನು ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾಡಿದರೆ ಮೊದಲು ಆ ಸ್ಥಾನಕ್ಕೆ ಸೂಕ್ತ ಗಾಂಭೀರ್ಯ ಒದಗಿಸುವುದಾಗಿ ಸೋಮಣ್ಣ ಹೇಳಿದ್ದರಲ್ಲಿ ಅಡಗಿರುವ ಅರ್ಥವನ್ನು ತಿಳಿದಿಕೊಳ್ಳಬಹುದು. ಎಲ್ಲರನ್ನು ಒಗ್ಗೂಡಿಸಿಕೊಂಡು ಹಿರಿಯ ನಾಯಕರ ಸಾಮರ್ಥಕ್ಕೆ ಅನುಗುಣವಾಗಿ ಜವಾಬ್ದಾರಿಯನ್ನು ವಹಿಸಿಕೊಟ್ಟು ಪಕ್ಷವನ್ನು ಬಲಪಡಿಸುವುದಾಗಿ ಸೋಮಣ್ಣ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ