AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕಿತ ಬಾಂಬರ್ ಬಗ್ಗೆ ಒಂದಷ್ಟು ಮಾಹಿತಿ ಸಿಕ್ಕಿದೆ ಆದರೆ ಅದನ್ನು ಬಹಿರಂಗಗೊಳಿಸಲಾಗಲ್ಲ: ಸಿದ್ದರಾಮಯ್ಯ, ಸಿಎಂ

ಶಂಕಿತ ಬಾಂಬರ್ ಬಗ್ಗೆ ಒಂದಷ್ಟು ಮಾಹಿತಿ ಸಿಕ್ಕಿದೆ ಆದರೆ ಅದನ್ನು ಬಹಿರಂಗಗೊಳಿಸಲಾಗಲ್ಲ: ಸಿದ್ದರಾಮಯ್ಯ, ಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 07, 2024 | 7:12 PM

ಶಂಕಿತನ ಬಗ್ಗೆ ಯಾವುದೇ ಸುಳಿವಿಲ್ಲವಲ್ಲ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ರಾಷ್ಟ್ರೀಯ ತನಿಖಾ ದಳ ಮತ್ತು ಬೆಂಗಳೂರು ಸಿಸಿಬಿ ಅಧಿಕಾರಿಗಳು ಶಂಕಿತ ಬಾಂಬರ್ ನನ್ನು ಹುಡುಕುತ್ತಿದ್ದಾರೆ, ಅವನ ಬಗ್ಗೆ ಒಂದಷ್ಟು ಸುಳಿವು ಸಿಕ್ಕಿದೆ ಆದರೆ ಆ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಗಲ್ಲ ಎಂದು ಹೇಳಿದರು.

ಬೀದರ್: ಬೀದರ ಜಿಲ್ಲೆ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಕಳೆದ ವಾರ ಬೆಂಗಳೂರು ನಗರದ ಬ್ರೂಕ್ಫೀಲ್ಡ್ ಪ್ರದೇಶದಲ್ಲ್ಲಿರುವ ದಿ ರಾಮೇಶ್ವರಂ ಕೆಫೆಯಲ್ಲಿ (The Rameshwaram Café) ಐಈಡಿ ಬಾಂಬ್ ಇಟ್ಟು ಟೈಮರ್ ಮೂಲಕ ಸ್ಫೋಟಿಸಿದ ಶಂಕಿತ ಬಾಂಬರ್ (suspected bomber) ಬಗ್ಗೆ ಒಂದಷ್ಟು ಸುಳಿವು ಸಿಕ್ಕಿದೆ ಎಂದು ಹೇಳಿದರು. ಬಾಂಬ್ ಸ್ಫೋಟಗೊಂಡು ಒಂದು ವಾರಕ್ಕಿಂತ ಜಾಸ್ತಿ ಸಮಯವಾದರೂ ಶಂಕಿತನ ಬಗ್ಗೆ ಯಾವುದೇ ಸುಳಿವಿಲ್ಲವಲ್ಲ ಸರ್ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ರಾಷ್ಟ್ರೀಯ ತನಿಖಾ ದಳ ಮತ್ತು ಬೆಂಗಳೂರು ಸಿಸಿಬಿ ಅಧಿಕಾರಿಗಳು ಶಂಕಿತ ಬಾಂಬರ್ ನನ್ನು ಹುಡುಕುತ್ತಿದ್ದಾರೆ, ಅವನ ಬಗ್ಗೆ ಒಂದಷ್ಟು ಸುಳಿವು ಸಿಕ್ಕಿದೆ ಆದರೆ ಆ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲಾಗಲ್ಲ ಎಂದು ಹೇಳಿದರು. ಎನ್ ಐಎ ಅಧಿಕಾರಿಗಳು ಶಂಕಿತನನ್ನು ಬಳ್ಳಾರಿಯಲ್ಲಿ ಹುಡುಕಾಡಿದ್ದಾರೆ. ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಮತ್ತು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರನ್ನು ಮುಖ್ಯಮಂತ್ರಿಯವರೊಂದಿಗೆ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನೀರಿನ ಸಮಸ್ಯೆ ಬಗೆಹರಿಸಿದರೆ ಕರ್ನಾಟಕಕ್ಕೆ ಸೇರುತ್ತೇವೆ: ಸಿದ್ದರಾಮಯ್ಯಗೆ ಮನವಿ ಮಾಡಿದ ಮಹಾರಾಷ್ಟ್ರದ ರೈತರು