AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ ಕ್ಷೇತ್ರದ ಟಿಕೆಟ್ ಬಿಜೆಪಿ ವರಿಷ್ಠರು ತನಗೆ ಮಾತ್ರ ಮೀಸಲಿಟ್ಟಿದ್ದಾರೆ ಎನ್ನುವಂತಿದೆ ಸುಮಲತಾ ಅಂಬರೀಶ್ ಮಾತಿನ ವರಸೆ

ಮಂಡ್ಯ ಕ್ಷೇತ್ರದ ಟಿಕೆಟ್ ಬಿಜೆಪಿ ವರಿಷ್ಠರು ತನಗೆ ಮಾತ್ರ ಮೀಸಲಿಟ್ಟಿದ್ದಾರೆ ಎನ್ನುವಂತಿದೆ ಸುಮಲತಾ ಅಂಬರೀಶ್ ಮಾತಿನ ವರಸೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 07, 2024 | 5:32 PM

Share

ಅವರಿಗೆ ವಿಶ್ವಾಸ ಇರೋದೇನೋ ನಿಜ ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಮಗ್ಗುಲ ಮುಳ್ಳಾಗಿದ್ದಾರೆ. ಮಂಡ್ಯ ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಡಿ ಅಂತ ಅವರ ಒಂದೇಸಮ ಬಿಜೆಪಿ ನಾಯಕರ ದುಂಬಾಲು ಬಿದ್ದಿದ್ದಾರೆ. ಈ ವಿಷಯವನ್ನು ಸುಮಲತಾ ಅವರಿಗೆ ಹೇಳಿದಾಗ, ತನಗಿಲ್ಲದ ಆತುರ ಮಾಧ್ಯಮದವರಿಗಿರುವಂತಿದೆ ಎನ್ನುತ್ತಾರೆ.

ಮಂಡ್ಯ: ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ನಗರದಲ್ಲಿ ಇವತ್ತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಆತ್ಮವಿಶ್ವಾಸದ ಮೂಟೆಯಾಗಿದ್ದರು. ಅವರ ಮಾತಿನ ವರಸೆ ಕೇಳುತ್ತಿದ್ದರೆ ಬಿಜೆಪಿ ವರಿಷ್ಠರು (BJP high command) ಈಗಾಗಲೇ ಅವರಿಗೆ ಟಿಕೆಟ್ ನೀಡಿದ್ದಾರೆ ಅನ್ನುವ ಹಾಗಿತ್ತು. ಖುದ್ದು ಬಿಜೆಪಿ ವರಿಷ್ಠರೇ ನಿಮ್ಮ ಬೆಂಬಲ ನಮಗೆ ಬೇಕು, ನಿಮ್ಮಿಂದಲೇ ಮಂಡ್ಯ ಭಾಗದಲ್ಲಿ ಪಕ್ಷಕ್ಕೆ ಶಕ್ತಿ ಬರಬೇಕಿದೆ ಅಂತ ಹೇಳಿದ್ದಾರೆ. ಅವರು ಇಷ್ಟೆಲ್ಲ ಹೇಳಿದ ನಂತರವೂ ಟಿಕೆಟ್ ಸಿಗುತ್ತೋ ಇಲ್ಲವೋ ಅಂತ ಅನುಮಾನಪಟ್ಟರೆ ಹೇಗೆ? ನನಗಂತೂ ವಿಶ್ವಾಸವಿದೆ ಎಂದು ಸುಮಲತಾ ಹೇಳಿದರು. ಅವರಿಗೆ ವಿಶ್ವಾಸ ಇರೋದೇನೋ ನಿಜ ಆದರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಗ್ಗುಲ ಮುಳ್ಳಾಗಿದ್ದಾರೆ. ಮಂಡ್ಯ ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಡಿ ಅಂತ ಅವರ ಒಂದೇಸಮ ಬಿಜೆಪಿ ನಾಯಕರ ದುಂಬಾಲು ಬಿದ್ದಿದ್ದಾರೆ. ಈ ವಿಷಯವನ್ನು ಸುಮಲತಾ ಅವರಿಗೆ ಹೇಳಿದಾಗ, ತನಗಿಲ್ಲದ ಆತುರ ಮಾಧ್ಯಮದವರಿಗಿರುವಂತಿದೆ, ತಾನೇ ಇಷ್ಟು ತಾಳ್ಮೆಯಿಂದಿರುವಾಗ ಮಾಧ್ಯಮಗಳಿಗ್ಯಾಕೆ ಧಾವಂತ? ಆಷ್ಟಕ್ಕೂ ಇನ್ನೊಂದು ವಾರವಷ್ಟೇ, ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಅನ್ನೋದು ಗೊತ್ತಾಗಿಬಿಡುತ್ತದೆ, ಕೊಂಚ ತಾಳ್ಮೆಯಿಂದಿರಿ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರಧಾನಿ ಮೋದಿ ವಿಶ್ವವೇ ಮೆಚ್ಚಿರುವ ಅಭಿವೃದ್ಧಿಯ ಹರಿಕಾರ, ಅವರೊಂದಿಗೆ ಕೆಲಸ ಮಾಡಿದರೆ ಮಂಡ್ಯ ಸಹ ಭಾರೀ ಪ್ರಗತಿ ಕಾಣಲಿದೆ: ಸುಮಲತಾ ಅಂಬರೀಶ್