ದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತಾಡುವಾಗ ತಿಹಾರ್ ಜೈಲಲ್ಲಿ ಕಳೆದ ದಿನಗಳನ್ನು ಜ್ಞಾಪಿಸಿಕೊಂಡ ಡಿಕೆ ಶಿವಕುಮಾರ್

ದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತಾಡುವಾಗ ತಿಹಾರ್ ಜೈಲಲ್ಲಿ ಕಳೆದ ದಿನಗಳನ್ನು ಜ್ಞಾಪಿಸಿಕೊಂಡ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 07, 2024 | 6:25 PM

ಈಡಿ ವಿಚಾರಣೆ ಮತ್ತು ಅವರ ಕಸ್ಟಡಿಯಲ್ಲಿ ಕಳೆದ ದಿನಗಳ ಜೊತೆ ತುಘಲಕ್ ರೋಡ್ ನಲ್ಲಿರುವ ಜೈಲಿನಲ್ಲಿ ಕಳೆದ ದಿನಗಳನ್ನು ಸಹ ಶಿವಕುಮಾರ್ ಜ್ಞಾಪಿಸಿಕೊಂಡರಲ್ಲದೆ ಆಗ ತನಗಾಗಿ ಕಾಯುತ್ತಿದ್ದ ಮಾಧ್ಯಮದ ಪ್ರತಿನಿಧಿಗಳನ್ನು ಸಹ ನೆನಪಿಸಿಕೊಳ್ಳುತ್ತಾ ಕೃತಜ್ಞತೆ ಸಲ್ಲಿಸಿದರು.

ದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ದೆಹಲಿಯಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಬಗ್ಗೆ ವರಿಷ್ಠರೊಂದಿಗೆ ಅವರು ಚರ್ಚೆ ನಡೆಸಲಿದ್ದಾರೆ. ಅದಕ್ಕೂ ಮೊದಲು ದೆಹಲಿಯಲ್ಲಿರುವ ಕನ್ನಡ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಹಣ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಂದ (Supreme Court) ಸಿಕ್ಕಿರುವ ರಿಲೀಫ್ ಗೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಅವರು ತಿಹಾರ್ ಜೈಲಿನಲ್ಲಿ (Tihar jail) ಕಳೆದ ದಿನಗಳನ್ನು ನೆನಪಿಸಿಕೊಂಡು ಅಂಥ ದಿನಗಳು ಮತ್ಯಾವತ್ತೂ ಬರೋದು ಬೇಡ ಎಂದರು. ಈಡಿ ವಿಚಾರಣೆ ಮತ್ತು ಅವರ ಕಸ್ಟಡಿಯಲ್ಲಿ ಕಳೆದ ದಿನಗಳ ಜೊತೆ ತುಘಲಕ್ ರೋಡ್ ನಲ್ಲಿರುವ ಜೈಲಿನಲ್ಲಿ ಕಳೆದ ದಿನಗಳನ್ನು ಸಹ ಶಿವಕುಮಾರ್ ಜ್ಞಾಪಿಸಿಕೊಂಡರಲ್ಲದೆ ಆಗ ತನಗಾಗಿ ಕಾಯುತ್ತಿದ್ದ ಮಾಧ್ಯಮದ ಪ್ರತಿನಿಧಿಗಳನ್ನು ಸಹ ನೆನಪಿಸಿಕೊಳ್ಳುತ್ತಾ ಕೃತಜ್ಞತೆ ಸಲ್ಲಿಸಿದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮಂತ್ರಿಗಳನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದು ಸರಿಯೇ ಎಂದು ಕೇಳಿದ ಪ್ರಶ್ನೆಗೆ ಅವರು ರಾಜಕಾರಣದಲ್ಲಿ ಎಲ್ಲವೂ ಸಾಧ್ಯ ಎಂದು ಹೇಳಿ ತಮ್ಮ ಬಲಭಾಗದಲ್ಲಿ ನಿಂತಿದ್ದ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಚಿವ ಟಿಬಿ ಜಯಚಂದ್ರ ಹೆಗಲ ಮೇಲೆ ಕೈಹಾಕಿದರು. ಜಯಚಂದ್ರ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  DK Shivakumar: ಇಡಿ ಪ್ರಕರಣ ರದ್ದಾದರೂ ಡಿಕೆ ಶಿವಕುಮಾರ್​ಗೆ ಕಾಡುತ್ತಿದೆ ಸಿಬಿಐ ಕಂಟಕ!

Published on: Mar 07, 2024 06:23 PM