[lazy-load-videos-and-sticky-control id=”6yLge7Xme4c”]
ಬೆಂಗಳೂರು: ಬಿಜೆಪಿ ಸೇರ್ಪಡೆಗೆ ಕೆಲ ಬಿಬಿಎಂಪಿ ಸದಸ್ಯರು ಮುಂದಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಕಾರ್ಪೊರೇಟರ್‌ಗಳು ಇಂತಹದೊಂದು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಸೆಪ್ಟೆಂಬರ್ 10 ಕ್ಕೆ ಹಾಲಿ ಕಾರ್ಪೋರೇಟರ್ಸ್ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿದ್ದು. ಮುಂಬರುವ ಎಲೆಕ್ಷನ್ ವೇಳೆಗೆ ಬಿಜೆಪಿಗೆ ಸೇರಲು ಕಾರ್ಪೋರೇಟರ್ಗಳು ಮುಂದಾಗಿದ್ದಾರೆ. ಇದರಲ್ಲಿ ಬಿಜೆಪಿಗೆ ಸೇರ್ಪಡೆ ಆಗುವವರ ಪಟ್ಟಿಯಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ಗಳು ಮುಂಚೂಣಿಯಲ್ಲಿದ್ದಾರೆ.
ಸದ್ಯ ಲಗ್ಗೆರೆ ವಾರ್ಡ್ನ ಜೆಡಿಎಸ್ ಕಾರ್ಪೋರೇಟರ್ ಮಂಜುಳಾ ಎನ್ .ಸ್ವಾಮಿ, ಬಿಟಿಎಂ ಲೇಔಟ್ ಕಾರ್ಪೋರೇಟರ್ ಕೆ. ದೇವದಾಸ್, ಮಾರತ್ ಹಳ್ಳಿ ವಾರ್ಡ್ನ ಪಕ್ಷೇತರ ಕಾರ್ಪೋರೇಟರ್ ಎನ್.ರಮೇಶ್, ಕೋನೇನ್ ಅಗ್ರಹಾರ ವಾರ್ಡ್ ಕಾರ್ಪೋರೇಟರ್ ಎಂ.ಚಂದ್ರಪ್ಪ ರೆಡ್ಡಿ ಬಿಜೆಪಿಗೆ ಸೇರಲಿದ್ದು ಕಾಂಗ್ರೆಸ್ನ ಕೆಲ ಕಾರ್ಪೋರೇಟರ್ಗಳು ಬಿಜೆಪಿಗೆ ಸೇರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಮುಂಬರುವ ಚುನಾವಣೆಗೆ ಬಿಜೆಪಿಯಿಂದಲೇ ಸ್ಪರ್ಧಿಸಲು ಪ್ಲಾನ್ ಮಾಡಿದ್ದಾರೆ. ಆದರೆ ಇದಕ್ಕೆ ಬಿಜೆಪಿಯಲ್ಲೇ ಅಪಸ್ವರ ವ್ಯಕ್ತವಾಗಿದೆ.
ಕಳೆದ ಬಾರಿಯ ಪಾಲಿಕೆ ಚುನಾವಣೆಯಲ್ಲಿ, ಕೈ ಅಭ್ಯರ್ಥಿ ಎದುರು ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿಗಳು ಈ ಬಾರಿ ಟಿಕೆಟ್ ಪಡೆಯಲು ಆಕಾಂಕ್ಷಿಗಳಾಗಿದ್ದು, ಕೈ ಕಾರ್ಪೋರೇಟರ್ಸ್ ಬಿಜೆಪಿಗೆ ಬಂದರೆ ಟಿಕೆಟ್ ತಪ್ಪುವ ಆತಂಕ ಕೂಡ ಶುರುವಾಗಿದೆ.
Published On - 8:00 am, Fri, 28 August 20