ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು..!

Edited By:

Updated on: Jun 23, 2025 | 3:30 PM

ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಇಂದು (ಜೂನ್ 23) ತುಮಕೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ತಹಶೀಲ್ದಾರ್​ ಗಳಿಗೆ ಕ್ಲಾಸ್ ತೆಗೆದುಕೊಂಡರು. ಬಾಕಿ ಉಳಿದ ಕೆಲಸಗಳ ಪೂರ್ಣಗೊಳಿಸೋದು ಯಾವಾಗ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ, ಕೆಲ ಅಧಿಕಾರಿಗಳು ಸಭೆಯಲ್ಲೇ ಮೊಬೈಲ್​ ​ನಲ್ಲಿ ಬ್ಯುಸಿಯಾಗಿರುವುದು ಕಂಡುಬಂದಿದೆ.

ತುಮಕೂರು, (ಜೂನ್ 23): ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಇಂದು (ಜೂನ್ 23) ತುಮಕೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ತಹಶೀಲ್ದಾರ್​ ಗಳಿಗೆ ಕ್ಲಾಸ್ ತೆಗೆದುಕೊಂಡರು. ಬಾಕಿ ಉಳಿದ ಕೆಲಸಗಳ ಪೂರ್ಣಗೊಳಿಸೋದು ಯಾವಾಗ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದ್ರೆ, ಕೆಲ ಅಧಿಕಾರಿಗಳು ಸಭೆಯಲ್ಲೇ ಮೊಬೈಲ್​ ​ನಲ್ಲಿ ಬ್ಯುಸಿಯಾಗಿರುವುದು ಕಂಡುಬಂದಿದೆ. ಸಚಿವರ ಮಾತಿಗೆ ಕಿವಿಗೊಡದೆ ಅಧಿಕಾರಿಗಳು ಮೊಬೈಲ್​​ ನಲ್ಲಿ ಫೇಸ್ಬುಕ್, ರೀಲ್ಸ್​ ನೋಡುತ್ತಾ ಕುಳಿತ್ತಿದ್ದಾರೆ. ಹಾಗಾದ್ರೆ, ಸಚಿವರ ಸಭೆ ಕಿಮ್ಮತ್ತೇ ಇಲ್ವಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಈ ರೀತಿಯ ಅಧಿಕಾರಿಗಳ ವರ್ತನೆಗೆ ಬ್ರೇಕ್ ಬೀಳಬೇಕಿದೆ.

Loading...
Unable to load recommendations.
Follow Us
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More